ಪ್ರಪಂಚದಲ್ಲೇ ಒಂದು ಅದ್ಭುತ ಜೀವ ಎಂದರೆ ಅದು ಅಪ್ಪ. ಪ್ರತಿಯೊಬ್ಬ ಹೆಣ್ಣು ಮಗಳಿಗೂ ತನ್ನ ಅಪ್ಪನೇ ಪ್ರಪಂಚ. ಅಂತೆಯೇ ನನ್ನ ಬದುಕಿನಲ್ಲೂ ಅಪ್ಪನೇ ಪ್ರಪಂಚ. ಯಾವುದೇ ವಿಷಯವಾಗಲಿ ಮೊದಲು ತಿಳಿಸುವುದು ಅಪ್ಪನಿಗೆ. ಅಪ್ಪನೊ೦ದಿಗೆ ಜಗಳವಾಡದ ದಿನಗಳಿಲ್ಲ. ಕೋಪ, ಮಾತು, ಹರಟೆ, ಹೀಗೆ...
ನನ್ನ ಈ ಪುಟ್ಟ ಪ್ರಪಂಚದಲ್ಲಿ ಅಪ್ಪನೇ ನನ್ನ ಹೀರೊ. ನಾನು ಏನೇ ಮಾಡುವುದಾದರೂ ಮೊದಲು ಕೇಳುವುದು ಅಪ್ಪನನ್ನು, ನನ್ನ ಅಪ್ಪನೇ ಲೈಫ್ ಎಂದರೂ ತಪ್ಪಲ್ಲ. ಅಪ್ಪನೊ೦ದಿಗೆ ಬೆಸ್ಟ್ ಫ್ರೆಂಡ್ ನಂತೆ ಇರ್ತೇನೆ. ನಾನು ಏನೇ ಹೇಳಿದರೂ ಇಲ್ಲ ಎಂದು ಹೇಳಿಲ್ಲ. ಯಾವುದೇ ವಿಷಯವಾದರೂ ಅಪ್ಪನೊ೦ದಿಗೆ ಚರ್ಚಿಸುತ್ತೇನೆ. ಆದರೆ ಅಮ್ಮನ ಮುಂದೆ ಮಾತನಾಡಲು ಧೈರ್ಯ ಸಾಕಾಗುವುದಿಲ್ಲ. ಅಪ್ಪನಲ್ಲಿ ಏನೇ ಹೇಳಿದರೂ ಸರಿಯಾದ ಸಲಹೆ ನೀಡುತ್ತಾರೆ. ಅಮ್ಮನಲ್ಲಿ ಕೇಳುವುದಕ್ಕಿ೦ತ ಮುಂಚೆಯೇ ಬೈಯಲು ಶುರುಮಾಡುತ್ತಾರೆ. ಯಾವುದೇ ಸಮಯ ಇರಲಿ ಕಣ್ಣು ಮುಚ್ಚಿ ನಂಬಬಹುದಾದ ಜೀವವೆ ಅಪ್ಪ. ಇವರು ಯಾವಾಗಲೂ ನನ್ನ ಜೊತೆ ಇರ್ತಾರೆ ಎನ್ನುವ ನಂಬಿಕೆ ನನಗಿದೆ.
ನನ್ನನ್ನು ಹೆಚ್ಚಾಗಿ ಇಷ್ಟ ಪಡುವ ವ್ಯಕ್ತಿ ಅಪ್ಪ. ನನ್ನ ಬಾಲ್ಯದಲ್ಲಿ ಅಪ್ಪನೊ೦ದಿಗೆ ಕಳೆದ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ. ನನ್ನ ಈಗಿನ ಸಂತೋಷ ಹಾಗೇ ಸಂತೋಷದ ಹಿಂದೆ ಇರುವ ಕಾರಣ ಅಪ್ಪ. ನನ್ನ ಫ್ರೆಂಡ್ ಕೈ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ಒಂದು ವೇಳೆ ಫ್ರೆಂಡ್ಸ್ ಕೈ ಬಿಟ್ಟರೂ ಅಪ್ಪ ಕೈ ಬಿಡುವುದಿಲ್ಲ. ನನ್ನ ಬೆನ್ನ ಹಿಂದೆ ನಿಂತು ನನಗೆ ಬೆಂಬಲಿಸುತ್ತಾರೆ. ನನ್ನೊಂದಿಗೆ ಸಮಯ ಮಾಡಿಕೊಂಡು ಆಟವಾಡಲು ಬರುತ್ತಾರೆ.
ಒಂದು ಕುಟುಂಬ ಎಂದ ಮೇಲೆ ಅಲ್ಲಿ ಅಪ್ಪನೇ ಪ್ರಮುಖ ಪಾತ್ರ ವಹಿಸುತ್ತಾರೆ. ತನ್ನ ಮಕ್ಕಳನ್ನು ಬೆಳೆಸುವುದರಲ್ಲಿ ಅಪ್ಪ ಮತ್ತು ಅಮ್ಮ ಪ್ರಮುಖ ಹಾಗೂ ವಿಶಿಷ್ಟ ಪಾತ್ರ ನಿರ್ವಹಿಸುತ್ತಾರೆ. ಅಮ್ಮ ಆದವಳು ಒಬ್ಬರೊಂದಿಗೆ ಹೇಗಿರಬೇಕೆಂದು ಹೇಳಿಕೊಟ್ಟರೆ, ಅಪ್ಪ ಆದವನು ಧೈರ್ಯದಿಂದಿರುವುದನ್ನು ಹೇಳಿಕೊಡುತ್ತಾನೆ. ಗಂಡು ಮಕ್ಕಳು ಹೆಚ್ಚಾಗಿ ಅಮ್ಮನನ್ನು ಇಷ್ಟಪಟ್ಟರೆ, ಹೆಣ್ಣು ಮಕ್ಕಳು ಅಪ್ಪನನ್ನು ಇಷ್ಟ ಪಡುತ್ತಾರೆ. ಅಪ್ಪ ಆದವನು ಮಗಳನ್ನು ಸ್ವತಂತ್ರವಾಗಿರಲು ಮತ್ತು ಧೈರ್ಯಶಾಲಿಯಾಗಿರಲು ಹೇಳಿಕೊಡುತ್ತಾನೆ. ಹಾಗೇ ಬಯಸುತ್ತಾನೆ.
ಅಪ್ಪ ಎಂದರೆ ಬೆಳಕು....ಅಪ್ಪನಿಂದಲೇ ಬದುಕು.... ಎಂದು ಸಹ ಹೇಳಬಹುದು. ಪ್ರತಿಯೊಂದು ಹೆಣ್ಣು ಮಗಳು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ತನ್ನ ಅಪ್ಪನನ್ನು ಇಷ್ಟ ಪಡುತ್ತಾಳೆ. ಎಲ್ಲೇ ಹೋಗುವುದಾದರೂ ತನ್ನ ಅಪ್ಪ ನನ್ನೊ೦ದಿಗೆ ಇರಬೇಕಿತ್ತು ಎಂದು ಅನ್ನಿಸುವುದು ಸಹಜ. ಅಪ್ಪ ಆದವನು ತನ್ನ ಮಗಳನ್ನು ರಾಣಿಯಂತೆ ಕಾಣಲು ಬಯಸುತ್ತಾನೆ. ಪ್ರತಿಯೊಬ್ಬ ತಂದೆಗೂ ತನ್ನ ಮಗಳೇ ರಾಜಕುಮಾರಿಯಾಗಿರುತ್ತಾಳೆ.
ಪ್ರತೀ ಮಕ್ಕಳು ತನ್ನ ಅಪ್ಪನಿಂದ ಕಲಿಯುವ ವಿಷಯ ಬಹಳ ಇರುತ್ತದೆ. ಗಂಡು ಮಕ್ಕಳು ಹೆಚ್ಚಾಗಿ ಅಪ್ಪನಂತಿರಬೇಕೆಂದು ಇಷ್ಟ ಪಡುತ್ತಾರೆ. ಅಪ್ಪ ಯಾವುದೇ ವಿಷಯವಾದರೂ ಅದನ್ನು ತನ್ನ ಮನಸಲ್ಲೇ ಇಟ್ಟುಕೊಳ್ಳುತ್ತಾರೆ. ಮಕ್ಕಳ ಮುಂದೆ ನಗು ನಗುತ್ತಾ, ಮಕ್ಕಳನ್ನು ನಗಿಸುತ್ತಾ, ತಾನು ಎಷ್ಟೇ ಸುಸ್ತಾಗಿದ್ದರೂ ಅದನ್ನು ಮಕ್ಕಳ ಮುಂದೆ ತೋರ್ಪಡಿಸುವುದಿಲ್ಲ.
ಹಾಗಾಗಿ ಅಪ್ಪ ಎಂದರೆ ಪದಗಳಿಗೆ ನಿಲುಕದ ಬಂಧನ. ಆ ಜೀವದ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ.
- ಧನ್ಯಶ್ರೀ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ