ಪ್ರೇಮಲೋಕ: ನನ್ನಿನಿಯನ ಕಾತುರದಲ್ಲಿ...

Upayuktha
0

ಮಾನವನೆಂದ ಮೇಲೆ ಆತನಲ್ಲಿ ಸಹಜವಾಗಿ ಇರುವುದೇನೆಂದರೆ ಕೇವಲ ಭಾವನೆಗಳಷ್ಟೇ. ಮಾನವ ಜಾತಿ ಎಂದಾಗ ಅದರಲ್ಲಿ ಎರಡು ವರ್ಗ. ಅದುವೇ ಹೆಣ್ಣು ಮತ್ತು ಗಂಡು. ಇಬ್ಬರಲ್ಲೂ ನಾನಾ ರೀತಿಯ ಭಾವನೆಗಳು ಇದ್ದೇ ಇರುತ್ತವೆ. ವಯೋಸಹಜವಾಗಿ ಆಯಾಯ ವಯಸ್ಸಿಗೆ ಸಂಬಂಧಪಟ್ಟಂತೆ ಭಾವನೆಗಳು ಎಲ್ಲರಲ್ಲೂ ಬದಲಾಗುತ್ತಾ ಹೋಗುತ್ತವೆ. ಪ್ರತಿಯೊಬ್ಬರ ಭಾವನೆಯು ಕೂಡ ಒಬ್ಬರ ಭಾವನೆಗಿಂತ ಭಿನ್ನವಾಗಿಯೇ ಇರುತ್ತವೆ.


ಹೆಣ್ಣಾಗಲಿ ಗಂಡಾಗಲಿ ಒಂದಲ್ಲ ಒಂದು ರೀತಿ ಆಕೆಯ ಅಥವಾ ಆತನ ಜೀವನ ಸಂಗಾತಿ ಹೇಗಿರಬೇಕು ಎಂಬುದನ್ನು ಯೋಚಿಸಿಯೇ ಯೋಚಿಸಿರುತ್ತಾರೆ. ಇನ್ನೊಬ್ಬಳು ತನ್ನ ಬಾಲ್ಯವನ್ನು ದಾಟಿ, ಹದಿಹರೆಯಕ್ಕೆ ಕಾಲಿಟ್ಟಾಕೆ ಅವಳೊಳಗಿನ ಪ್ರೇಮಾಂಗಣದಲ್ಲಿ ಅಡಗಿದ ಭಾವನೆಗಳನ್ನು ಹೇಳುತ್ತಿದ್ದಾಳೆ.


ಇದುವರೆಗೂ ಯಾವೊಬ್ಬನನ್ನು ಕೂಡ ಇಷ್ಟಪಡದೆ, ಆಕೆಯ ಕಲ್ಪನಾ ಲೋಕದಲ್ಲಿ ಅವಳ ಇನ್ನಿಯ ಹೇಗಿರಬೇಕು ಎಂಬೆಲ್ಲಾ ಯೋಚನೆಗಳನ್ನು ಇಟ್ಟುಕೊಂಡು ಇನಿಯನ ಆಗಮನಕ್ಕಾಗಿ ಕಾಯುತ್ತಿದ್ದಾಳೆ. ಈಕೆ ತನ್ನ ಸುತ್ತಮುತ್ತಲು ಎಷ್ಟೋ ಹುಡುಗರನ್ನು ಕಂಡರೂ ಒಂದು ದಿನವಾದರೂ ಅವರನ್ನು ಕಂಡು ಮನಸೋತವಳಲ್ಲ. ಅವಳ ಪ್ರಕಾರ ಆಕೆಯ ಇನಿಯನ ರೂಪರೇಷೆಗಳನ್ನು ಆಕೆಯೇ ರಚಿಸಿಕೊಂಡಿದ್ದಳು. ತನ್ನ ಇನಿಯನನ್ನು ಹಲವು ಉದಾಹರಣೆಗಳೊಂದಿಗೆ ಹೋಲಿಕೆ ಮಾಡುತ್ತಾ ಆತ ಎಂತಿರಬೇಕು ಎಂಬುದನ್ನು ಹೇಳುತ್ತಿದ್ದಾಳೆ.


"ಸೂರ್ಯನಂತೆ ಬೆಳಕು ನೀಡುವವನಾಗಬೇಕಾಗಿಲ್ಲ, ಕತ್ತಲನ್ನು ಚಂದಗಾಣಿಸುವ ಚಂದ್ರನಾಗಿದ್ದರೆ ಸಾಕು. ಸದಾ ಹರಿಯುವ ನದಿಯಾಗಿರಬೇಕಾಗಿಲ್ಲ, ಎಂದೂ ಬತ್ತದ ಬಾವಿಯಾಗಿದ್ದರೆ ಸಾಕು. ನಿರಂತರ ತಿರುಗುವ ಗಾಳಿಯಂತ್ರವಾಗದಿದ್ದರೂ, ತಂಪು ಗಾಳಿ ಬೀಸುವ ಬೀಸಣಿಗೆಯಾಗಬೇಕು. ಅಂಬರದಿ ಮಿನುಗುವ ತಾರೆಯಂತಿರಬೇಕಾಗಿಲ್ಲ, ಆಗಾಗ ಕಾಣಿಸಿಕೊಳ್ಳುವ ಮಿಂಚುಹುಳವಾದರೆ ಸಾಕು. ಬಯಸಿದ್ದನ್ನೆಲ್ಲಾ ಕೊಡುವ ಅಕ್ಷಯ ಪಾತ್ರೆಯಾಗಬೇಕಾಗಿಲ್ಲ, ನನ್ನೊಳಗಣ ಭಾವನೆಗಳಿಗೆ ಪಾತ್ರನಾದರೆ ಸಾಕು. ಬಗೆದಷ್ಟು ಮುಗಿಯದ ಶ್ರೀಮಂತಿಕೆ ಬೇಕಿಲ್ಲ, ಸಾಕೆನ್ನುವಷ್ಟು ಹೃದಯವಂತಿಕೆ ಇದ್ದರಾಯ್ತು. ಮಹಲಿನಂತ ಮನೆಬೇಕೆಂದಿಲ್ಲ, ಬೀಡಾರವಾದರೂ ಅದರೊಳಗೆ ಆರಾಮಾನೇ ಇದ್ದರಾಯ್ತು."


ಒಟ್ಟಾರೆಯಾಗಿ ಈಕೆಯ ಭಾವನೆಗಳ ಸಾರಾಂಶ ಹೇಳುವುದೇನೆಂದರೆ ಈಕೆ ಇನ್ನೇನನ್ನು ಬಯಸುತ್ತಿಲ್ಲ, ಬಯಸುತ್ತಿರುವುದು ಕೇವಲ ನಿಷ್ಕಲ್ಮಶ ಪ್ರೀತಿಯಷ್ಟೇ. ಪ್ರಪಂಚದ ತುಂಬಾ ತುಂಬಿರುವ ಕಪಟ,ಮೋಸ ಕಂಡ ಈಕೆ ಇವೆಲ್ಲವನ್ನೂ ಮೀರಿದ ಪ್ರೀತಿಗಾಗಿ ಹಪಹಪಿಸುತ್ತಿದ್ದಾಳೆ. ನೇರವಾಗಿ ಈಕೆ ಏನನ್ನು ಹೇಳದಿದ್ದರೂ ಅವಳ ಮಾತಿನ ಅರ್ಥ ಇಷ್ಟೇ ಆಕೆಗೆ ಬೇಕಾಗಿರುವುದು ತೋರಿಕೆಯ ಜಗತ್ತಲ್ಲ, ಆಕೆಯನ್ನೇ ಜಗತ್ತಾಗಿಸುವ ತೋರಿಕೆ. ಹಾಗಾಗಿ ಈಕೆ ಯಾವುದೇ ರೀತಿಯ ಅಂದ-ಚೆಂದ, ಆಭರಣ ಶ್ರೀಮಂತಿಕೆ ಇದಾವುದನ್ನು ಬಯಸದೆ, ಆಕೆ ಇನ್ನೂ ಕಂಡಿರದ ತನ್ನ ಇನಿಯನಾದರೂ ತಾನು ಬಯಸುವ ಈ ಪ್ರಪಂಚದಿಂದ ಆಕೆಗೆ ದೊರೆಯದ ಪ್ರೀತಿಯನ್ನು ನೀಡಿ ಆಕೆ ಇರುವಂತೆಯೇ ಒಪ್ಪಿ ಅಪ್ಪಿಕೊಳ್ಳುವ ಇನಿಯನ ಸೇರುವ ಕಾತುರದಿಂದ ಕಾಯುತ್ತಿದ್ದಾಳೆ.


-ಚೈತನ್ಯ ಲಕ್ಷ್ಮೀ

ದ್ವಿತೀಯ ಪತ್ರಿಕೋದ್ಯಮ

ವಿವೇಕಾನಂದ ಕಾಲೇಜು ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top