ವಿ. ವಿ ಕಾಲೇಜಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ

Upayuktha
0

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಇತ್ತೀಚೆಗೆ ಅಂಬೇಡ್ಕರ್ ಅವರ ಮಹಾಪರಿರ್ವಾಣವನ್ನು ಸ್ಮರಿಸಲಾಯಿತು. ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಯೋಜಕ ಡಾ. ಕುಮಾರಸ್ವಾಮಿ ಎಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.


ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೀಸಲಾತಿ ಒದಗಿಸಿದ್ದು ಮತ್ತು ಭಾರತೀಯ ಸಂವಿಧಾನ ರಚಿಸಿದ್ದು ಇವೆರೆಡಷ್ಟೇ ಅಂಬೇಡ್ಕರ್ ಅವರ ಕೊಡುಗೆಯಲ್ಲ. ಅವರೊಬ್ಬ ಮಹಿಳಾ ಹಕ್ಕುಗಳ ಪ್ರತಿಪಾದಕ. ಹೆಣ್ಣನ್ನು ಪೂಜನೀಯವಾಗಿ ಮಾತ್ರವಲ್ಲ ಸಮಾನವಾಗಿ ನೋಡಿ ಎಂದು ಹೇಳಿದ್ದು ಅಂಬೇಡ್ಕರ್. ಅವರು ಹಿಂದೂ ಧರ್ಮವನ್ನು ಪ್ರಶ್ನಿಸಲಿಲ್ಲ, ಬದಲಾಗಿ ಅಂಧ ಆಚರಣೆಗಳನ್ನು ಪ್ರಶ್ನೆಸಿದರು. “ಮಹಾ ಮಾನವತಾವಾದಿ, ಸಮಾನತೆಯ ನಾಯಕ ಅಂಬೇಡ್ಕರ್ ರನ್ನು ಸರ್ವರೂ ಗೌರವಿಸಬೇಕಿದೆ,” ಎಂದು ಹೇಳಿದರು.


ಪ್ರಸ್ತಾವಿಕವಾಗಿ ಮಾತನಾಡಿದ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಟಿ. ರೋಡಣ್ಣನವರ್, ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅಸ್ಪೃಶ್ಯತೆಯ ಬೆಂಕಿಯಲ್ಲಿ ಬೆಂದು ಜಗತ್ತೇ ಮೆಚ್ಚುವಂತಹ ಸಾಧನೆ ಮಾಡಿದವರು. ಅವರ ಜೀವನ ನಮಗೆಲ್ಲರಿಗೂ ಆದರ್ಶವಾಗಬೇಕಿದೆ ಎಂದರು.


ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಿಕಿ ಡಾ. ನಾಗರತ್ನ ರಾವ್, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top