ಕವನ: ಭಕ್ತಿಯಿಂದಲಿ ನಮಿಸುವೆ ಮುಖ್ಯ ಪ್ರಾಣ

Chandrashekhara Kulamarva
0



ಧೀರ ಮಾರುತಿಯ ನಿತ್ಯ ನೆನೆಯಲು

ಹರಣವಾಗುವುದೆಲ್ಲ ದುರಿತ ದುಮ್ಮಾನ

ಸರಮಾಲೆ ತೊಟ್ಟ ರಾಮಭಂಟನ ನೆನೆಯಲು

ಕರುಣಿಸುವ ಶಂಕೆಯಿಲ್ಲದೆ ಶಕ್ತಿ ಮುಕ್ತಿಯ

ಭಕ್ತಿಯಿಂದಲಿ ನಾ ನಮಿಸುವೆ ಮುಖ್ಯಪ್ರಾಣ


ಸೌಮಿತ್ರಿಯ‌ ಪೊರೆದವನ ನೆನೆಯಲು

ಅಮಿತ ಫಲಗಳ ನೀಡಿ ಸಲಹುವ

ಕಾಮಿತ ವರವೀವ ರಾಮದೂತನ ಸ್ಮರಿಸೆ

ಸುಮತಿಯನಿತ್ತು ಪ್ರೇಮದಿಂದಲಿ ಹರಸುವ‌

ಭಕ್ತಿಯಿಂದಲಿ ನಾ ನಮಿಸುವೆ ಮುಖ್ಯಪ್ರಾಣ


ಕಪಿ ಶಿರೋಮಣಿಯ ಬಿಡದೆ ನೆನೆಯಲು

ವಿಫುಲ ಸಿರಿಯನಿತ್ತು ಕಾಯ್ವ ರಾಮದೂತ

ಗೋಪಾಲವಿಠಲನ ಭಕ್ತಾಗ್ರಣಿಯ ಶರಣೆನೆ

ಪಾಪರಾಶಿಯ ದಹಿಸಿ ಸಲಹುವ ಪವನತನಯ

ಭಕ್ತಿಯಿಂದಲಿ ನಾ ನಮಿಸುವೆ ಮುಖ್ಯಪ್ರಾಣ


ಎಂತು ಹಾಡಲಿ ವೀರ ಹನುಮ ಲೀಲೆಯ

ಕೋತಿ ರೂಪದಿ ಬಂದು ಪರಾಕ್ರಮ ಮೆರೆದವನ

ಭೂತಳದ ಜನಕೆ ಹರಿಭಕ್ತಿ ಕರುಣಿಪನ

ಸತತ ಭಜಿಸಿ ಪೊಡಮಡುವೆ ಪಾದಕೆ

ಭಕ್ತಿಯಿಂದಲಿ ನಾ ನಮಿಸುವೆ ಮುಖ್ಯಪ್ರಾಣ


✍️ ಎಸ್.ಎಲ್.ವರಲಕ್ಷ್ಮೀಮಮಜುನಾಥ್.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Tags

إرسال تعليق

0 تعليقات
إرسال تعليق (0)
To Top