ಕುಂಬ್ಳೆ ಸುಂದರ ರಾವ್ ನಿಧನಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಂತಾಪ

Upayuktha
0


ಸಮಕಾಲೀನ ಯಕ್ಷಗಾನ ಕಲಾವಿದರಲ್ಲಿ ತಮ್ಮ ವಿಶಿಷ್ಠ ವಾಕ್‍ಚಾತುರ್ಯದಿಂದ ಶ್ರೇಷ್ಠ ಕಲಾವಿದರಾಗಿ ಮೆರೆದ ಕುಂಬ್ಲೆ ಸುಂದರರಾವ್ ನಮ್ಮ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಕಲಾವಿದರಾಗಿ ಅನೇಕ ವರ್ಷಗಳ ಕಾಲ ಸೇವೆ ಮಾಡಿದ್ದು ಅವರ ಪಾತ್ರವನ್ನು ಯಕ್ಷಗಾನ ಕ್ಷೇತ್ರ ಮರೆಯುವಂತಿಲ್ಲ. ಅವರ ಮಾತಿನ ಶೈಲಿ ಮತ್ತು ಪಾತ್ರಗಳಿಗೆ ಜೀವಕಳೆ ತುಂಬುವ ರೀತಿ ಅದ್ಭುತವಾಗಿತ್ತು.


ಸುರತ್ಕಲ್ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಅವರು ನನ್ನಲ್ಲಿ ಪ್ರಾಸಬದ್ಧವಾಗಿ ಹೇಳಿದ ಮಾತು ನನಗೆ ಇಂದಿಗೂ ನೆನಪಿದೆ. ಆಗ ಅವರು “ಗೆದ್ದರೆ ಎಮ್ಮೆಲ್ಲೆ, ಸೋತರೆ ನಿಮ್ಮಲ್ಲೆ” ಎಂದು ಹೇಳಿದ್ದರು. ಚುನಾವಣೆಯಲ್ಲಿ ವಿಜೇತರಾಗಿ ಅವರಿಗೆ ರಾಜಕೀಯ ಕ್ಷೇತ್ರದಲ್ಲಿಯೂ ಸೇವೆ ಮಾಡುವ ಅವಕಾಶ ಒಗದಿತ್ತು. ಅವರ ನಿಧನದಿಂದ ಶ್ರೇಷ್ಠ ಕಲಾವಿದರೊಬ್ಬರ ಸ್ಥಾನ ಶೂನ್ಯವಾಗಿದೆ. ಅವರನ್ನು ಕಳೆದುಕೊಂಡು ಯಕ್ಷಗಾನ ರಂಗ ಬಡವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.

ಡಿ. ವೀರೇಂದ್ರ ಹೆಗ್ಗಡೆಯವರು



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top