ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಆನ್ಲೈನ್ ಮುಖಾಂತರದ ಕಲಿಕೆ ಎಲ್ಲ ವಿಚಾರಗಳಲ್ಲೂ ಮುಂಚೂಣಿಗೆ ಬಂದಿದೆ. ಅದೇ ರೀತಿ "ಅಲಕನಂದಾ ಸಂಗೀತ ಸಭಾ" ಎಂಬ ಹೆಸರಿನ ಅಡಿಯಲ್ಲಿ ಸುಮಾರು ಒಂದೂವರೆ ವರ್ಷದಿಂದ ಆನ್ಲೈನ್'ನಲ್ಲೆ ತರಗತಿಗಳನ್ನು ನಡೆಸಿ ಹರಿದಾಸರ ರಚನೆಯ ದೇವರನಾಮಗಳನ್ನು ಹಲವಾರು ಮಹಿಳೆಯರಿಗೆ ಅಭ್ಯಾಸ ಮಾಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹಲವಾರು ಕ್ಷೇತ್ರಗಳಲ್ಲಿ ಭೌತಿಕ ಭಜನಾ ಕಾರ್ಯಕ್ರಮಗಳನ್ನು ನೀಡಬೇಕೆಂಬ ಅಪೇಕ್ಷೆ ಹೊಂದಿದೆ.
ಅದರಂತೆ "ಅಲಕನಂದಾ" ಭೌತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಇದೇ ಜನವರಿ 1ರಂದು ಸಂಜೆ 5:30ಕ್ಕೆ ನಗರದ ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾದೀಶ್ವರರಾದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆಶೀರ್ವಾದದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರು ಶ್ರೀ ಗುರುಯರಾಯರ ದಿವ್ಯಸನ್ನಿಧಾನದಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.
ಈ ಸಂದರ್ಭದಲ್ಲಿ ಅರ್ಚಕರಾದ ನಂದಕಿಶೋರಾಚಾರ್ ಹಾಗೂ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಚಾರಕರಾದ ದೇಸಾಯಿ ಸುಧೀಂದ್ರ ಅವರು ಉಪಸ್ಥಿತರಿರುವರು. ಅಲಕನಂದಾ ಮುಖ್ಯಸ್ಥೆ ಶ್ರೀಮತಿ ಸಹನಾ ಶ್ರೀವತ್ಸ ಹಾಗೂ ಸಂಗಡಿಗರಿಂದ ಪ್ರಥಮ ಭಜನಾ ಕಾರ್ಯಕ್ರಮವು ನಡೆಯಲಿದ್ದು, ಪಿಟೀಲು ವಾದನದಲ್ಲಿ ಶ್ರೀವತ್ಸ ಸುಬೋಧ ಹಾಗೂ ಮೃದಂಗವಾದನದಲ್ಲಿ ಆರ್. ವಿಶ್ವಾಸ್ ಅವರ ವಾದ್ಯಸಹಕಾರವು ಇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಯರ ಅನುಗ್ರಹಕ್ಕೆ ಪಾತ್ರರಾಗಲು ಇದೊಂದು ಸದಾವಕಾಶವಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ