ಬಿ.ಎಂ.ಎಸ್ ಮಹಿಳಾ ಮಹಾವಿದ್ಯಾಲಯ: 'ಅಭಿನಂದನಾ' ಪದವಿ ಪ್ರದಾನ ಸಮಾರಂಭ

Upayuktha
0

ಬೆಂಗಳೂರು: ಬಿ.ಎಂ.ಎಸ್‌ ಮಹಿಳಾ ಮಹಾವಿದ್ಯಾಲಯವು ದಿನಾಂಕ 16-12-2022ರಂದು ಬೆಳಿಗ್ಗೆ 11:30ಕ್ಕೆ 2019-2022ನೇ ಸಾಲಿನ ವಿದ್ಯಾರ್ಥಿನಿಯರಿಗೆ 'ಅಭಿನಂದನಾ' ಎಂಬ ಶೀರ್ಷಿಕೆ ಅಡಿಯಲ್ಲಿ ಪದವಿ ಪ್ರದಾನ ಸಮಾರಂಭವನ್ನು ಏರ್ಪಡಿಸಿತ್ತು.


ಬಿ.ಎಂ.ಎಸ್. ಸಮೂಹ ಸಂಸ್ಥೆಗಳ ಅಧ್ಯಕ್ಷರು ಹಾಗೂ ದಾನಿಗಳಾದ ಡಾ. ಬಿ.ಎಸ್. ರಾಗಿಣಿ ನಾರಾಯಣ್ ಅವರು ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಬಿ.ಎಂ.ಎಸ್ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಡಿ.ಇ. ವಸುಂಧರಾ ಅವರು ಗಣ್ಯರನ್ನು ಮತ್ತು ವಿದ್ಯಾರ್ಥಿನಿಯರನ್ನು ಸ್ವಾಗತಿಸಿ ಶುಭ ಕೋರಿದರು. ಇದು ಮುಂಬರುವ ವರ್ಷಗಳಲ್ಲಿ ನೆನಪಿಡುವ ಒಂದು ದೊಡ್ಡ ವ್ಯಾಖ್ಯಾನಿತ ಕ್ಷಣವಾಗಿದ್ದು, ಸಾರ್ವಕಾಲಿಕ ಶಕ್ತಿ ಮತ್ತು ನಿಮ್ಮ ಅರ್ಹತೆಯನ್ನು ಗಳಿಸಲು ನೀವು ಹಾಕಿರುವ ಶ್ರಮ ಮತ್ತು ಸಾಧಿಸಿದ ಎಲ್ಲವನ್ನೂ ಆಚರಿಸಲು ಉತ್ತಮ ಅವಕಾಶವನ್ನು ಘಟಿಕೋತ್ಸವ ನೀಡುತ್ತದೆ ಎಂದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐ.ಎಸ್.ಇ.ಸಿ. ಯ ನಿವೃತ್ತ ನಿರ್ದೇಶಕರಾದ ಶ್ರೀ ಡಾ.ಎಂ.ಜಿ. ಚಂದ್ರಕಾಂತ್, ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ, ಅದರಲ್ಲೂ ವಿದ್ಯಾರ್ಥಿನಿಯರಲ್ಲಿ ಸಮಾಜವನ್ನು ಮುನ್ನಡೆಸುವ ಶಕ್ತಿಯಿದೆ ಎಂದು ಹೇಳುತ್ತಾ, ತಮ್ಮ ಜೀವನದಲ್ಲಿ ಸ್ಫೂರ್ತಿಯಾದ ಮಹಿಳೆಯರ ಬಗ್ಗೆ ಮಾತನಾಡಿದರು. ಅಕ್ಕ ಮಹಾದೇವಿಯ ವಚನಗಳನ್ನೂ ಪಠಿಸಿದರು.


ಗಣ್ಯರಿಂದ ಪದವಿ ಪತ್ರಗಳ ಪ್ರದಾನ ಮಾಡಲಾಯಿತು.


ಡೀನ್ ರೀಟಾ ಭಟ್ಟಾಚಾರ್ಯ ಅವರು ಬೋಧಿಸಿದ ಪದವಿ ಪ್ರಮಾಣ ವಚನವನ್ನು ಪದವೀಧರರು ಸ್ವೀಕರಿಸಿದರು.


ಬಿಎಂಎಸ್ ಪಡವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಪದ್ಮ ಬಿ, ಬಿಎಂಎಸ್ ಶಿಕ್ಷಣ ದತ್ತಿಯ ನಿರ್ವಾಹಕ ನಿರ್ದೇಶಕರಾದ ವಿಂಗ್ ಕಮ್ಯಾಂಡರ್ ಆರ್.ಎ. ರಾಘವನ್, ಬಿಎಂಎಸ್ ಆಸ್ಪತ್ರೆಯ ಅಧ್ಯಕ್ಷರಾದ ಗೌತಮ್ ವಿ ಕಲತ್ತೂರ್, ಬಿಎಂಎಸ್ ಶಿಕ್ಷಣ ದತ್ತಿಯ ಹಣಕಾಸು ಅಧಿಕಾರಿಯಾದ ಅನಿರ್ಬನ್ ಶರ್ಮ, ಹಣಕಾಸು ನಿರದೇಶಕರಾದ ಪ್ರಕಾಶ್ ರಾವ್ ಹಾಹು ಸಂಜೀವ ಬಿ.ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಪ್ರೊಫೆಸರ್ ಗಾಯತ್ರಿ ಎ ಅವರು ವಂದನಾರ್ಪಣೆ ಮಾಡಿದರು.

ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು ಮತ್ತು ಎಲ್ಲಾ ಪದವೀಧರರು ಮತ್ತು ಪೋಷಕರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top