ಅಂಬಿಕಾ ಪದವಿಪೂರ್ವ ವಿದ್ಯಾಲಯ ವಾಣಿಜ್ಯ ವಿದ್ಯಾರ್ಥಿಗಳಿಂದ ಕ್ಯಾಂಪ್ಕೋ ಭೇಟಿ

Upayuktha
0


ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ‘ಕೈಗಾರಿಕಾ ಭೇಟಿ’ ಕಾರ್ಯಕ್ರಮ ನಡೆಯಿತು. ಪದವಿ ಪೂರ್ವ ವಾಣಿಜ್ಯ ವಿದ್ಯಾರ್ಥಿಗಳು ಕೆಮ್ಮಿಂಜೆಯ ಕ್ಯಾಂಪ್ಕೋ ಚಾಕಲೇಟು ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು.

ಕ್ಯಾಂಪ್ಕೋ ಚಾಕಲೇಟು ತಯಾರಿಕಾ ಘಟಕದ ಆಡಳಿತ ವಿಭಾಗದ ರಾಧೇಶ್ ಮಾಹಿತಿ ನೀಡಿ, ಕ್ಯಾಂಪ್ಕೋ ಮೂಲಕ ಕೃಷಿಕರಿಂದ ಕೋಕೋ ಖರೀದಿಸಿ ಅದನ್ನು ಸಂಸ್ಕರಣೆ ಮಾಡಿ ಕೋಕೋ ಪೌಡರ್ ಹಾಗೂ ಕೋಕೋ ಬಟರ್ ಉತ್ಪಾದನೆ ಮಾಡಲಾಗುತ್ತದೆ. ಕೋಕೋ ಬಟರ್‌ಗೆ ಕೆ.ಜಿ.ಗೆ 700 ರೂಪಾಯಿಗೂ ಹೆಚ್ಚು ಮೌಲ್ಯವಿದ್ದು, ದೇಶದ ವಿವಿಧ ಘಟಕಗಳಿಗೆ ಮಾರಾಟ ಮಾಡಲಾಗುತ್ತಿದೆ. ಘಟಕದಲ್ಲಿ ಉತ್ಪಾದಿಸಿದ ವಿವಿಧ ಬಗೆಯ ಉತ್ಪನ್ನಗಳನ್ನು ದೇಶದ ವಿವಿಧೆಡೆ ವಿತರಣೆ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಚಾಕಲೇಟ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಕೋ ಕೋ ಬೀನ್ ಸಂಸ್ಕರಣೆ ಹೊಂದಿ ಕೋ ಕೋ ಪೌಡರ್ ಹಾಗೂ ಬಟರ್ ಆಗುವ ವಿಧಾನದ ಬಗೆಗೆ, ಸಕ್ಕರೆ ಹಾಗೂ ವಿವಿಧ ವಸ್ತುಗಳನ್ನು ಬಳಸಿಕೊಂಡು ಚಾಕಲೇಟ್ ಉತ್ಪಾದನೆಯಾಗುವ ಬಗೆ ಹಾಗೂ ಅದನ್ನು ಪ್ಯಾಕೇಜಿಂಗ್ ಮಾಡುವ ಪ್ರಕ್ರಿಯೆಯ ಕುರಿತಾದ ಮಾಹಿತಿಯನ್ನು ಪಡೆದುಕೊಂಡರು.

ರಾಧೇಶ್ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. 63 ವಿದ್ಯಾರ್ಥಿಗಳು ಕ್ಯಾಂಪ್ಕೋ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಈ ವೇಳೆ ನೆಲ್ಲಿಕಟ್ಟೆ ಅಂಬಿಕಾ ಪಿಯು ವಿದ್ಯಾಲಯ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅಕ್ಷತಾ, ಉಪನ್ಯಾಸಕರಾದ ವಿದ್ಯಾ ಸರಸ್ವತಿ, ಕಾವ್ಯಾ, ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಉಪನ್ಯಾಸಕ ಹರ್ಷಿತ್ ಪಿಂಡಿವನ ಉಪಸ್ಥಿತರಿದ್ದರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top