ಮಂದಾರಬೈಲ್‌ ದೇವಸ್ಥಾನದಲ್ಲಿ 48 ದಿನಗಳ ನಿತ್ಯ ನಾದೋಪಾಸನಾ ಸೇವೆಗೆ ಚಾಲನೆ

Upayuktha
0


ದೇರೆಬೈಲ್‌ (ಮಂಗಳೂರು): ಮಂದಾರಬೈಲ್ ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನದಲ್ಲಿ 2023 ಫೆಬ್ರವರಿ 11 ರಂದು ಲೋಕಕಲ್ಯಾಣಾರ್ಥವಾಗಿ ನಡೆಯಲಿರುವ  ಶ್ರೀನಿವಾಸ ಕಲ್ಯಾಣೋತ್ಸವದ ಪೂರ್ವಭಾವಿ ಕಾರ್ಯಕ್ರಮದ ಪ್ರಯುಕ್ತ ವಿವಿಧ ಭಜನಾ ಮಂಡಳಿಯವರ ಸಹಭಾಗಿತ್ವದಲ್ಲಿ 48 ದಿನ ನಡೆಯಲಿರುವ ನಿತ್ಯ ನಾದೋಪಾಸನಾ ಸೇವೆ (ಭಜನೆ) ಕಾರ್ಯಕ್ರಮದ ಉದ್ಘಾಟನೆ ಡಿ.22ರ ಗುರುವಾರದಂದು ಸಂಜೆ 5.30ಕ್ಕೆ ನೆರೆವೇರಿತು. 

 

ಕದ್ರಿ ಮಂಜುನಾಥ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ. ಕೃಷ್ಣ ಅಡಿಗ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಾಸುದೇವ ಭಟ್ ಕೆ, ಉದ್ಯಮಿ, ರಾಜೇಂದ್ರ ಪ್ರಸಾದ್ ಎಕ್ಕಾರು, ನಿವೃತ್ತ ರಿಜಿಸ್ಟ್ರಾರ್ KPT, ಅವನೀಶ್ ಭಟ್, ಅಧ್ಯಕ್ಷರು, ಮಥುರಾ ಅಪಾರ್ಟ್ಮೆಂಟ್, ಕೊಂಚಾಡಿ, ರಂಗನಾಥ್ ಭಟ್, ಪ್ರಧಾನ ಅರ್ಚಕರು, ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವಸ್ಥಾನ ಮಂದಾರಬೈಲು, ಅಮಿತಾ, ಅಧ್ಯಕ್ಷರು ಕರ್ನಾಟಕ ಜೋಗಿ ಮಹಿಳಾ ಘಟಕ, ಕದ್ರಿ, ದುರ್ಗಾದಾಸ್ ಇರ್ವತ್ರಾಯ, ಅದ್ಯಕ್ಷರು, ಶ್ರೀನಿವಾಸ ಕಲ್ಯಾಣೋತ್ಸವ ಸೇವಾ ಸಮಿತಿ, ಲಕ್ಷ್ಮಣ್ ದೇವಾಡಿಗ, ಅಧ್ಯಕ್ಷರು, ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವಸ್ಥಾನ, ಮಂದಾರಬೈಲು ಭಾಗವಹಿಸಿದ್ದರು.


ಗುರು ಪ್ರಸಾದ್ ಕಡಂಬಾರ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ರಾವ್,  ಗೋಪಾಲಕೃಷ್ಣ ಭಟ್, ಪ್ರಕಾಶ್ ರಾವ್, ಹಿಮಕರ್ ರಾವ್, ಶ್ರೀಮತಿ ಜ್ಯೋತಿ ಪ್ರವೀಣ್, ವೆಂಕಟರಮಣ ಶೆಟ್ಟಿಗಾರ್, ದೂಮಪ್ಪ ಮೂಲ್ಯ, ಮಧುಸೂದನ ಅಲೆವೂರಾಯ ಮತ್ತು ಸಮಿತಿಯ ಸದಸ್ಯರು, ಕಾರ್ಯಕರ್ತರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top