ಲಾಲ್‍ಬಾಗ್: ನ.26 ರಿಂದ ರಾಜ್ಯ ಮಟ್ಟದ ಖಾದಿ ಉತ್ಸವ - 2022; ವಸ್ತು ಪ್ರದರ್ಶನ

Upayuktha
0

ಮಂಗಳೂರು: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ರಾಜ್ಯ ಮಟ್ಟದ ಖಾದಿ ಉತ್ಸವ-2022ರ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನ.26 ರಿಂದ ಡಿಸೆಂಬರ್ 10ರವರೆಗೆ ನಗರದ ಲಾಲ್‍ಬಾಗ್ ನಲ್ಲಿರುವ ಕರಾವಳಿ ಮೈದಾನದಲ್ಲಿ ಆಯೋಜಿಸಿದೆ.


ವಸ್ತು ಪ್ರದರ್ಶನದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಆಯೋಗದಿಂದ ಮಾನ್ಯತೆ ಪಡೆದ ಘಟಕಗಳ ಫಲಾನುಭವಿ, ಸಂಘ-ಸಂಸ್ಥೆಗಳು ಭಾಗವಹಿಸಬಹುದು.


ವಸ್ತು ಪ್ರದರ್ಶನದಲ್ಲಿ ಭಾಗವಹಿಸುವ ಗ್ರಾಮ ಕೈಗಾರಿಕೆ (6x10 ಅಡಿ) ಮಳಿಗೆಗೆ 12,050 ರೂ.ಗಳು ಮತ್ತು ಖಾದಿ ಮಳಿಗೆಗೆ (10x10) 14,410 ರೂ.ಗಳನ್ನು ಪಾವತಿಸಿ ಮಳಿಗೆ ಮುಂಗಡವಾಗಿ ಕಾಯ್ದಿರಿಸಲು ಡಿ.ಡಿ ಮೂಲಕ ಕರ್ನಾಟಕ ಸ್ಟೇಟ್ ಖಾದಿ ಆಂಡ್ ವಿಲೇಜ್ ಇಂಡಸ್ಟ್ರೀಸ್ ಬೋರ್ಡ್, ಮಂಗಳೂರು ಹಾಗೂ ಆರ್.ಟಿ.ಜಿ.ಎಸ್ ಮೂಲಕ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಎಮ್.ಜಿ ರೋಡ್, ಲಾಲ್‍ಬಾಗ್ ಮಂಗಳೂರು, ಖಾತೆ ಸಂಖ್ಯೆ:520101235441224, ಐ.ಎಫ್.ಎಸ್.ಸಿ ಕೋಡ್: UBIN0901806 ಗೆ ಪಾವತಿಸಬೇಕು.


ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ:9480825644, 0824-2454800 ಅಥವಾ ನಗರದ ಲಾಲ್‍ಬಾಗ್ ನಲ್ಲಿರುವ ಮಹಾನಗರ ಪಾಲಿಕೆ ಕೆಳ ಮಹಡಿಯಲ್ಲಿರುವ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಜಿಲ್ಲಾ ಕಚೇರಿ ಸಂಪರ್ಕಿಸುವಂತೆ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top