ಕನ್ನಡ ಬಳಸಿ, ಬೆಳೆಸಿ, ಉಳಿಸಿ: ಡಾ. ಚೂಂತಾರು

Upayuktha
0

ಮಂಗಳೂರು: ದಿನಾಂಕ 09-11-2022ನೇ ಬುಧವಾರದಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಗೌರವ ಕಾರ‍್ಯದರ್ಶಿಗಳಾದ ಡಾ|| ಮುರಲೀ ಮೋಹನ್ ಚೂಂತಾರು ಮತ್ತು ಗಣೇಶ್ ಪ್ರಸಾದ್‌ಜೀ ಅವರು ನಗರದ ಜ್ಯೋತಿ ಸರ್ಕಲ್‌ನಲ್ಲಿರುವ ಬ್ಯಾಂಕ್ ಆಫ್ ಬರೋಡಾದ ವಲಯ ಕಛೇರಿಯಲ್ಲಿ, ಬ್ಯಾಂಕ್ ಆಫ್ ಬರೋಡಾದ ಉಪ ವಲಯ ಮುಖ್ಯಸ್ಥರು ಮತ್ತು ಉಪ ಪ್ರಧಾನ ವ್ಯವಸ್ಥಾಪಕರಾದ ಆರ್. ಗೋಪಾಲಕೃಷ್ಣ ಅವರಿಗೆ ಆಡಳಿತದಲ್ಲಿ ಮತ್ತು ಜನರಿಗೆ ಸೇವೆ ನೀಡುವಾಗ ಕಡ್ಡಾಯವಾಗಿ ಕನ್ನಡ ಬಳಸುವಂತೆ ಮನವಿ ನೀಡಿದರು.


ಬ್ಯಾಂಕಿನ ಹೆಚ್ಚು ಎಲ್ಲಾ ನೌಕರರು ಹೆಚ್ಚು ಕನ್ನಡ ಕಲಿಯುವಂತೆ ಪ್ರೇರೇಪಣೆ ನೀಡುವಂತೆ ಅವರಲ್ಲಿ ವಿನಂತಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ಸಹಕಾರ ನೀಡಿದ್ದಕ್ಕಾಗಿ ಆರ್ ಗೋಪಾಲಕೃಷ್ಣ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದರ ಜೊತೆಗೆ ಎಲ್ಲಾ ನೌಕರರೂ ಕನ್ನಡದಲ್ಲಿ ಹೆಚ್ಚು ವ್ಯವಹರಿಸಿ ಕನ್ನಡ ಉಳಿಸಿ, ಬಳಸಿ, ಬೆಳೆಸಲು ವಿನಂತಿಸಲಾಯಿತು.


ಈ ಸಂದರ್ಭದಲ್ಲಿ ಶ್ರೀ ಎಡ್ವಿನ್ ಅಜಯ್ ಡಿ’ಸೋಜಾ ಮುಖ್ಯ ಪ್ರಬಂಧಕರು, ಬ್ಯಾಂಕ್ ಆಫ್ ಬರೋಡಾ, ಶ್ರೀಮತಿ ಉಷಾ ಸತೀಶ್ ಸಹಾಯಕ ಪ್ರಬಂಧಕರು, ವಲಯ ಕಛೇರಿ ಮತ್ತು ಶ್ರೀ ಸುಬ್ರಾಯಭಟ್ ಕೋಶಾಧಿಕಾರಿ ಕಸಾಪ ಮಂಗಳೂರು ಇವರುಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top