ಮಂಗಳೂರು: ಪ್ರತಿಯೊಂದು ವಿಷಯವು ಸಕಾರಾತ್ಮಕ ಮತ್ತು ನಕಾರಾತ್ಮಕ ವಿಷಯಗಳನ್ನು ಒಳಗೊಂಡಿರುತ್ತದೆ. ನಕಾರಾತ್ಮಕ ಘಟನೆಗಳು ದೊಡ್ಡ ಸ್ವರೂಪ ಪಡೆಯದಿರಲು, ಇತರ ಧನಾತ್ಮಕ ವಿಷಯಗಳ ಕಡೆ ಗಮನಹರಿಸಬೇಕು, ಎಂದು ಡೆಹರಾಡೂನ್ ವೈಶ್ವಿಕ ಹಿಂದಿ ಸಂಘ ಸಂಸ್ಥಾನದ ಮಹಾನಿರ್ದೇಶಕಿ ಡಾ.ಜಯಂತಿ ಪ್ರಸಾದ್ ನೌಟಿಯಾಲ್ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತಭವನದಲ್ಲಿ ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯ ಹಿಂದಿ ವಿಭಾಗ, ಹಿಂದಿ ಅಧ್ಯಾಪಕ ಸಂಘ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಸಹಯೋಗತ್ವದಲ್ಲಿ ಎನ್.ಇ.ಪಿ ತೃತೀಯ ಸೆಮಿಸ್ಟರ್ ಪಠ್ಯಕ್ರಮ ಕುರಿತ ಎಂಬ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿಂದಿ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ.ನಾಗರತ್ನ ರಾವ್ ಬರೆದ, ಹಿಂದಿ ಸಾಹಿತ್ಯ ಔರ್ ನಾರಿ ಸಮಾಜ್ ಹಿಂದಿ ತಥಾ ಕನ್ನಡ್ ದಲಿತ್ ಕಹಾನಿಯೋ ಮೆ ಸಾಮಾಜಿಕ್ ಸಮಾನ್ ಥಾ ಕಿ ಮಾಂಗ್ ಮತ್ತು ಹಿಂದಿ ವಿಭಾಗ ಮುಖ್ಯಸ್ಥೆ ಡಾ. ಸುಮ ಸಹಯೋಗದೊಂದಿಗೆ ಬರೆದ, ಸ್ವಾಧೀನ್ ತಾ ಆಂದೋಲನ್ ಔರ್ ಹಿಂದಿ ಸಾಹಿತ್ಯ ಮೆ ದಲಿತ್ ಸಮಾಜ್ ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮ ಆರ್ ಉಪಸ್ಥಿತರಿದ್ದರು. ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ. ನಾಗರತ್ನ ರಾವ್ ಸ್ವಾಗತಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ರೇಖಾ ಕೆ ನಿರೂಪಿಸಿದರು. ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗಧ್ಯಕ್ಷ ಡಾ.ರಾಜೀವ್ ಧನ್ಯವಾದ ಸಮರ್ಪಿಸಿದರು. ವಿವಿಧ ಕಾಲೇಜುಗಳ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸನ್ಮಾನ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಕನ್ಯಾ ಮೇರಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಪಿ.ಹೆಚ್.ಡಿ ಪೂರ್ಣಗೊಳಿಸಿದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಜ್ಯೋತಿ ಜೆ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಡಾ. ವೈಶಾಲಿ ಸಾಲಿಯಾನ್, ಕೊಣಾಜೆ ಪ್ರಥಮ ದರ್ಜೆ ಕಾಲೇಜಿನ ಡಾ. ರೇಖಾ, ಕಾರ್ ಸ್ಟ್ರೀಟ್ ಕಾಲೇಜಿನ ಡಾ. ಶಕುಂತಲಾ ಮತ್ತು ಡಾ. ತಸ್ಲಿಮಾ ಅವರನ್ನು ಸನ್ಮಾನಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ