ಶಾಸ್ತ್ರೀಯ ಸಂಗೀತ; ಇಹಪರದ ದೈವಿಕ ಸಂಗೀತ ಸಮೀಕರಣ

Upayuktha
0

ಉಜಿರೆ: ಸಾಮಾನ್ಯರ ತಿಳಿವಿಗೆಟುಕದ ಆಧ್ಯಾತ್ಮದ ತತ್ವಗಳು ಶಾಸ್ತ್ರೀಯ ಸಂಗೀತ; ಇಹಪರದ ದೈವಿಕ ಸಂಗೀತ ಸಮೀಕರಣಯ ರಾಗದ ಆಲಾಪದೊಂದಿಗೆ ಸಂಗೀತಸ್ವರಗಳ ಮೂಲಕ ಪ್ರಸ್ತುತಪಡಿಸಲ್ಪಟ್ಟರೆ ಹೇಗಿರುತ್ತದೆ? ಹಾಗಾದರೆ ಕಠಿಣ ಆಧ್ಯಾತ್ಮ ಸರಳವಾಗುತ್ತದೆ. ಕೇಳುವವರೊಳಗೆ ಆತ್ಮ-ಪರಮಾತ್ಮದ ಕುರಿತು ತಿಳಿದುಕೊಳ್ಳುವ ಕುತೂಹಲವನ್ನು ಹುಟ್ಟಿಸುತ್ತದೆ.


ಧರ್ಮಸ್ಥಳದ ವಸ್ತುಪ್ರದರ್ಶನ ಮಂಟಪದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಇಂಥದ್ದೊಂದು ಪ್ರಭಾವ ಹುಟ್ಟಿಸುವಲ್ಲಿ ಯಶಸ್ವಿಯಾಯಿತು. ಕನಕದಾಸ ವಿರಚಿತ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಎಂಬ ಪ್ರಶ್ನಾರ್ಥಕ ಸಾಲುಗಳೊಂದಿಗಿನ ಕಾವ್ಯದ ಮಾಧುರ್ಯಪೂರ್ಣ ಪ್ರಸ್ತುತಿಯ ಮೂಲಕ ವಿದುಷಿ ಅನುರಾಧ ಅಡ್ಕಸ್ಥಳ ಆಧ್ಯಾತ್ಮ ಚಿಂತನೆಯ ಸೊಗಡನ್ನು ಹರಡಿದರು.


ಇಹಪರದೊಂದಿಗಿನ ದೈವಿಕ ಸಂಯೋಗದ ಶ್ರೇಷ್ಠತೆಯನ್ನು ಸಾರುವ ಕನಕದಾಸರ ಈ ಪದವನ್ನು ತಮ್ಮ ಶಾಸ್ತ್ರೀಯ ಧ್ವನಿಮಾಧುರ್ಯದ ಮೂಲಕ ಹಾಡಿ ವಿದುಷಿ ಅನುರಾಧ ಅಲ್ಲಿದ್ದವರನ್ನು ಸೆಳೆದರು. ಇಹದ ಪ್ರತಿಯೊಂದು ಅಸ್ತಿತ್ವದೊಂದಿಗೆ ದೈವಿಕತೆಯು ಸಮೀಕರಣಗೊಂಡ ಸೌಂದರ್ಯವನ್ನು ತಮ್ಮ ಧ್ವನಿಯ ಮೂಲಕ ಅವರು ಅನಾವರಣಗೊಳಿಸಿದರು. ಸತತ ಒಂದು ಗಂಟೆಗಳ ಕಾಲ ಜರುಗಿದ ಸಂಗೀತ ರಸದೌತಣ ಕಲಾ ಆರಾಧಕರ ಗಮನ ಸೆಳೆಯಿತು.


ಈ ಸಂಗೀತ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಪುತ್ತೂರು(ಮೃದಂಗ), ಬಾಲರಾಜ್ ಕಾಸರಗೋಡು (ವಯೋಲಿನ್) ಅಮೃತ ನಾರಾಯಣ ಹೊಸಮನೆ (ಮೋರ್ಸಿಂಗ್) ಹಾಗೂ ಶರಧಿ ಅಡ್ಕಸ್ಥಳ (ವೀಣೆ) ಸಾತ್ ನೀಡಿದರು. ಕರ್ನಾಟಕ ಶಾಸ್ತ್ರೀಯ ಸಂಗೀತದ ವಿವಿಧ ರಾಗ ತಾಳಗಳಾದ ಬಹುದಾರಿ ರಾಗ, ಆದಿತಾಳ ಶ್ರೀ ಗುರು ರಮಣ . ರಾಗ ದ್ವಿಜಾವಂತಿ, ಆದಿತಾಳ, ರಾಗ ಅಭೇರಿ, ಆದಿತಾಳ ಹೀಗೆ ವಿವಿಧ ರಾಗ ತಾಳಗಳಿಂದ ಕಲಾರಸಿಕರ ಮನಸೆಳೆಯಿತು.


ವರದಿ:

ಐಶ್ವರ್ಯ ಕೋಣನ

ದ್ವಿತೀಯ ವರ್ಷ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ


ಚಿತ್ರಗಳು: ಶಶಿಧರ ನಾಯ್ಕ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top