ಮಂಗಳೂರು ವಿವಿ: ಅಂತರಾಷ್ಟ್ರೀಯ ಅಂತರ ಹೋಲಿಕೆ ಅಭ್ಯಾಸ ಯಶಸ್ವಿ

Upayuktha
0

ಮಂಗಳೂರು: ವಿಕಿರಣ ಸಂರಕ್ಷಣಾ ಅಧ್ಯಯನದ ರಾಷ್ಟ್ರೀಯ ಸೌಲಭ್ಯವಾದ ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಕಿರಣಶೀಲತೆಯ ಉನ್ನತ ಸಂಶೋಧನಾ ಕೇಂದ್ರವು (CARER) ಇತ್ತೀಚೆಗೆ ರೇಡಾನ್ ಮಾಪನ ಸಾಧನಗಳಿಗಿರುವ ಸುಧಾರಿತ ಮಾಪನಾಂಕ ನಿರ್ಣಯ ಸೌಲಭ್ಯವನ್ನು ಬಳಸಿಕೊಂಡು ‘ರೇಡಾನ್ ಅಳತೆ ಸಾಧನಗಳುʼಅಂತರಾಷ್ಟ್ರೀಯ ಅಂತರ ಹೋಲಿಕೆ ಅಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.


ಹಲವಾರು ದೇಶಗಳನ್ನು ಒಳಗೊಂಡ ಇಂತಹ ದೊಡ್ಡ ಪ್ರಮಾಣದ ಪ್ರಯೋಗ ಭಾರತದಲ್ಲಿ ಮೊದಲ ಬಾರಿಗೆ ನಡೆದಿದೆ. ಇದನ್ನು ಮುಂಬೈನ ಬಾಬಾ ಪರಮಾಣು ಸಂಶೋಧನಾ ಕೇಂದ್ರದ (BARC) ರೇಡಿಯೊಲಾಜಿಕಲ್ ಫಿಸಿಕ್ಸ್ ಮತ್ತು ಸಲಹಾ ವಿಭಾಗದ ಸಹಯೋಗದೊಂದಿಗೆ ನಡೆಸಲಾಯಿತು. ಎರಡು ತಿಂಗಳ ಅವಧಿಯ ಈ ಅಭ್ಯಾಸದಲ್ಲಿ ಆರು ದೇಶಗಳ (ಜಪಾನ್, ದಕ್ಷಿಣ ಕೊರಿಯಾ, ಚೀನಾ, ಜೆಕ್ ರಿಪಬ್ಲಿಕ್, ವಿಯೆಟ್ನಾಂ ಮತ್ತು ಭಾರತ) ಹತ್ತು ಪ್ರಯೋಗಾಲಯಗಳು ಇದರಲ್ಲಿ ಭಾಗವಹಿಸಿದ್ದವು.


CARER ಮುಖ್ಯಸ್ಥ ಪ್ರೊ.ಕರುಣಾಕರ ನರೆಗುಂದಿ ಮಾತನಾಡಿ, ಅಣು ವಿಜ್ಞಾನಗಳ ಸಂಶೋಧನಾ ಮಂಡಳಿಯ (BARC) ಧನಸಹಾಯದ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯದ CARER ನಲ್ಲಿ ಅತ್ಯಾಧುನಿಕ ಮಾಪನಾಂಕ ನಿರ್ಣಯ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ಇದು ಏಷ್ಯಾದಲ್ಲಿಯೇ ಅತಿ ದೊಡ್ಡ ವಾಕ್-ಇನ್ ಮಾದರಿಯ ಮಾಪನಾಂಕ ನಿರ್ಣಯ ಸೌಲಭ್ಯವಾಗಿದೆ ಮತ್ತು ವಿಶ್ವದಲ್ಲೇ ಎರಡನೇ ಅತಿ ದೊಡ್ಡದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top