ಸುಮಧುರ ಸಂಗೀತ 'ಸುಪ್ರೀತಾ'

Upayuktha
0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ ಆಯೋಜನೆಗೊಂಡ ಕುಮಾರಿ ಸುಪ್ರೀತಾ ಅವರ ಸಂಗೀತ ಕಾರ್ಯಕ್ರಮ ನೆರೆದ ಪ್ರೇಕ್ಷಕರ ಮನಸೂರೆಗೊಳಿಸಿತು.


ಲಕ್ಷದೀಪೋತ್ಸವದ ಮೊದಲ ದಿನದ ಪ್ರಪ್ರಥಮ ಸಾಂಸ್ಕೃತಿಕ ಕಾರ್ಯಕ್ರಮವಾಗಿತ್ತು. ಇದರ ಮೂಲಕವೈವಿಧ್ಯಮಯ ಲಕ್ಷದೀಪೋತ್ಸವ ಚಾಲನೆ ಕಂಡಿತು. ಅಟಾನಾ ರಾಗದ ಶ್ರೀ ಮಹಾಗಣಪತಿಮ್ ಭಜೆ ಹಾಡಿನ ಮೂಲಕ ವಿಘ್ನವಿನಾಶಕನನ್ನು ಸ್ಮರಿಸಿದರು.


ಕಮಲ ಮನೋಹರಿ ರಾಗದ ‘ಕಂಜದಳಾಯತಾಕ್ಷಿ ಕಾಮಾಕ್ಷಿ’, ಹಂಸನಾದ ರಾಗದ ‘ಬಂಟುರೀತಿ ಕೋಲು’, ಹಿಂಧೋಳ ರಾಗದ ‘ಸಾಮಜವರಗಮನ ಹಾಡು’, ಭೈರವಿ ರಾಗದ ‘ಓಡಿ ಬಾ ರಂಗಯ್ಯ’ ಹಾಗೂ ಬೃಂದಾವನಿ ಸಾರಂಗ ರಾಗದ ‘ತಿಲ್ಲಾನ ತನದಿಂ’ ಹಾಡು ಗಮನ ಸೆಳೆದವು.


‘ಎಲ್ಯಾಡಿ ಬಂದೆ ಮುದ್ದು ರಂಗಯ್ಯ’ ಎಂದು ಜಗದೋದ್ಧಾರ ಶ್ರೀಕೃಷ್ಣನ ತಾಯಿ ಪ್ರೀತಿಯಿಂದ ಕೇಳುವ ಪರಿಯನ್ನು ಚಾರುಕೇಶಿ ರಾಗದೊಂದಿಗೆ ಬಹಳ ಸೊಗಸಾಗಿ ಹಾಡಿದರು. ನಿರಂತರ ಒಂದು ಗಂಟೆಯವರೆಗೆ ಸಂಗೀತ ಪ್ರಸ್ತುತಿಯ ಮೂಲಕ ಪ್ರೇಕ್ಷಕರ ಮನಗೆದ್ದರು.


ಈ ಸಂಗೀತ ರಸದೌತಣ ಕಾರ್ಯಕ್ರಮದಲ್ಲಿ ಸುಪ್ರೀತಾಳ ಗುರು ವಿದುಷಿ ಶ್ರೀಮತಿ ಅನಸೂಯ ಉಜಿರೆ ತಂಬೂರಿಯಲ್ಲಿ ಸಹಕರಿಸಿದರು. ಕುಮಾರಿ ಧನಶ್ರೀ ಶಬರಾಯ ವಯೋಲಿನ್ ನುಡಿಸುವುದರ ಮೂಲಕ ಸಂಗೀತ ಸಂಜೆಯಲ್ಲಿ ಪಾಲ್ಗೊಂಡರು. ಮೃದಂಗ ವಾದಕರಾಗಿ ಶ್ರೀಯುತ ಪವನ್ ಪುತ್ತೂರು ಸಾಥ್ ನೀಡುವುದರೊಂದಿಗೆ, ಆರನೇ ತರಗತಿಯ ಶ್ರೀ ವರ್ಚಸ್ ಖಂಜೀರವನ್ನು ನುಡಿಸಿದರು.


ಸುಪ್ರೀತಾಳ ಸುಮಧುರ ಕಂಠದ ಗಾಯನಕ್ಕೆ ಮನಸೋತ ಕೆಲ ಕಲಾವಿದರು ಆಕೆಯ ಹಾಡಿನೊಂದಿಗೆ ತಾವೂ ತಲ್ಲೀನರಾಗಿ ದನಿಗೂಡಿಸುತ್ತಿದ್ದರು. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ಕೊಡಲ್ಪಡುವ ಶಿಷ್ಯ ವೇತನಕ್ಕೆ ಭಾಜನರಾಗಿರುವ ಸುಪ್ರೀತಾ ಧರ್ಮಸ್ಥಳ ಎಸ್.ಡಿ.ಎಂ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ.


ಬೇರೆ ಬೇರೆ ವೃತ್ತಿರಂಗದಲ್ಲಿ ನಿರತರಾಗಿರುವ ಕಲಾವಿದರ ತಂಡವೊಂದು ಸಂಗೀತದ ಅಭಿರುಚಿಯೊಂದಿಗೆ ವೇದಿಕೆಯಲ್ಲಿ ಒಂದಾಗಿರುವುದು ವಿಶೇಷವಾಗಿತ್ತು. ಎಸ್.ಡಿ.ಎಂ ಸಂಸ್ಥೆಯ ಹಿಂದಿ ಶಿಕ್ಷಕ ಸುನಿಲ್ ಪಂಡಿತ್ ಕಾರ್ಯಕ್ರಮವನ್ನು ನಿರೂಪಿಸಿದರು.


ವರದಿ: ರಕ್ಷಾ ಕೋಟ್ಯಾನ್, ಸ್ನಾತಕೊತ್ತರ ಪತ್ರಿಕೋದ್ಯಮ ವಿಭಾಗ, ಎಸ್.ಡಿ.ಎಂ ಕಾಲೇಜು, ಉಜಿರೆ

ಚಿತ್ರ ಕೃಪೆ: ಭಾರತಿ ಹೆಗಡೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top