ಉಜಿರೆ: "ಯಾವ ವಿಷಯವು ನಮ್ಮ ಭಾವ ಸೂಚ್ಯಂಕವನ್ನು ಹೆಚ್ಚಿಸಿಕೊಳ್ಳಲು ದಾರಿ ಮಾಡಿಕೊಡುತ್ತದೋ ಅದುವೇ ಸಾಹಿತ್ಯ" ಎಂದು ಬೆಟ್ಟಂಪಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ್ ಚಂದ್ರಗಿರಿ ಹೇಳಿದರು.
ಉಜಿರೆ ಶ್ರೀ ಧ. ಮಂ. ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಿದ "2022-23 ನೇ ಸಾಲಿನ ಕನ್ನಡ ಸಂಘದ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ" ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
"ಸಾಹಿತ್ಯವು ಕೇವಲ ಮನೋರಂಜನೆಗೆ ಸೀಮಿತವಾಗದೆ ಮಾನವೀಯತೆ ಬೆಳೆಸುವ ದಾರಿಯಾಗಬೇಕು. ಅನೇಕ ಜೀವಸಲೆಯನ್ನು ಹೊಂದಿರುವುದೇ ಸಾಹಿತ್ಯ. ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಮುಖಗಳನ್ನು ಸಾಹಿತ್ಯಕ್ಕೆ ಬಿಟ್ಟರೆ ಬೇರೆ ಯಾವುದಕ್ಕೂ ತೋರಿಸಲು ಆಗುವುದಿಲ್ಲ ಇದು ಸಾಹಿತ್ಯದ ಶಕ್ತಿ "ಎಂದು ನುಡಿದರು.
ಸಂವಹನಕ್ಕೆ ಮಾತ್ರ ಸಾಹಿತ್ಯ ಸೀಮಿತಗೊಳಿಸಿದರೆ ಯಾವ ಸ್ವಾರಸ್ಯವು ಇರುವುದಿಲ್ಲ. ರೂಪಕಗಳ ಮೂಲಕ ಸಾಹಿತ್ಯದ ಶಕ್ತಿಯನ್ನು ಇಂದು ಅರ್ಥ ಮಾಡಿಕೊಳ್ಳುವ ಪ್ರಯತ್ನವಾದರೆ ಸಾಹಿತ್ಯ ನಮ್ಮನ್ನು ಬೆಳೆಸುತ್ತದೆ. ಕನ್ನಡದ ಕಡೆ ನಾವು ತೆರೆದುಕೊಳ್ಳುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬೋಜಮ್ಮ ಕೆ. ಎನ್ ಮಾತನಾಡುತ್ತಾ"ವಿದ್ಯಾರ್ಥಿಗಳು ಕನ್ನಡ ವಿಭಾಗದ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ಪಡೆದು ಈ ಮೂಲಕ ಅನೇಕ ಚರ್ಚೆ ಸಂವಾದಗಳಲ್ಲಿ ತೊಡಗಲಿ" ಎಂದು ಹಾರೈಸಿದರು.
ಕಾರ್ಯದರ್ಶಿ ಹಾಗೂ ಜೊತೆ ಕಾರ್ಯದರ್ಶಿಯಾಗಿ ತೃತೀಯ ವರ್ಷದ ಜಯಶ್ರಿ ಮತ್ತು ಸಂಜಯ್ ಆಯ್ಕೆಯಾದರೆ ದ್ವಿತೀಯ ಬಿಎಯ ರೇಷ್ಮಾ ಮತ್ತು ವಿಘ್ನೇಶ್, ಪ್ರಥಮ ವರ್ಷದ ಹಿಮಾಲಿ ಹಾಗೂ ನಿಶಾಂತ್ ಪದಾಧಿಕಾರಿಗಳಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬೋಜಮ್ಮ ಕೆ. ಎನ್. ಪ್ರಾಧ್ಯಾಪಕರಾದ ಡಾ.ರಾಜಶೇಖರ್ ಹಳೆಮನೆ, ಡಾ. ದಿವಾಕರ್ ಕೊಕ್ಕಡ ಮತ್ತಿತರು ಉಪಸ್ಥಿತರಿದ್ದರು.
ತೃತೀಯ ಬಿಎ ವಿದ್ಯಾರ್ಥಿನಿ ಸ್ನೇಹ ಕಾರ್ಯಕ್ರಮ ನಿರೂಪಿಸಿದರು, ಜಯಶ್ರೀ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ