ಎಸ್.ಡಿ.ಎಂ ಪ.ಪೂ ಕಾಲೇಜು: ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

Upayuktha
0

ಮಲವಂತಿಗೆ: ನಮ್ಮ ವ್ಯಕ್ತಿತ್ವ ವಿಕಸನ,  ಸಮಯ ಪಾಲನೆ, ಸೇವಾ ಮನೋಭಾವನೆ, ಸಂಬಂಧಗಳ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಅರಿಯಲು ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಗಳು ಸಹಕಾರಿಯಾಗುತ್ತವೆ. ಇಲ್ಲಿ ಜೀವನಮೌಲ್ಯಗಳನ್ನು ಕಲಿಯುವುದರೊಂದಿಗೆ ಜೀವನದುದ್ದಕ್ಕೂ ಅದನ್ನು ಬೆಳೆಯಿಸಿಕೊಳ್ಳಬೇಕು. ಸಹಬಾಳ್ವೆಯೊಂದಿಗೆ ಬಾಳುವುದನ್ನು ಶಿಬಿರ ಕಲಿಸುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಹೇಳಿದರು.


ಇವರು ಮಲವಂತಿಗೆಯ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕಾಲೇಜಿನ ಪ್ರಾಚಾರ್ಯರಾದ ಪ್ರೊ. ದಿನೇಶ ಚೌಟ ಅವರು ಶಿಬಿರದ ವಿಶೇಷತೆಗಳನ್ನು ತಿಳಿಸಿದರು. ಶ್ರೀ ಧ.ಮಂ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಲಕ್ಷ್ಮೀನಾರಾಯಣ , ಸ.ಪ್ರೌಢ ಶಾಲೆ ಮಿತ್ತಬಾಗಿಲು ಇದರ ಮುಖೋಪಾಧ್ಯಾಯಿನಿ ಪುಷ್ಪಕಲಾ, ಗ್ರಾ.ಪಂ ಸದಸ್ಯರಾದ ಚಂದ್ರಶೇಖರ ಗೌಡ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಉಮೇಶ್ ಗೌಡ, ಉಪನ್ಯಾಸಕ ರಾಜೇಶ್ ಕಲ್ಬೆಟ್ಟು ಉಪಸ್ಥಿತರಿದ್ದರು.


ಸ್ಥಳೀಯ ಸಮಿತಿಯ ಅಧ್ಯಕ್ಷರಾದ ತೀಕ್ಷಿತ್ ಕಲ್ಬೆಟ್ಟು ಹಾಗೂ ಕಾರ್ಯದರ್ಶಿ ಎಚ್. ಜಯಂತ್ ಹೆಗ್ಡೆ ಯೋಜನಾಧಿಕಾರಿಗಳನ್ನು ಗೌರವಿಸಿ ಮಾತನಾಡಿದರು.


ಇದೇ ಸಂದರ್ಭದಲ್ಲಿ ವಿಶೇಷವಾಗಿ ಸಹಕರಿಸಿದ ಅಧ್ಯಕ್ಷ ತೀಕ್ಷಿತ್ ಕಲ್ಬೆಟ್ಟು, ಕಾರ್ಯದರ್ಶಿ ಜಯಂತ್ ಹೆಗ್ಡೆ, ಜಯಾನಂದ ಗೌಡ ದಂಪತಿ ಹಾಗೂ ಲೀಲಾ ಅವರನ್ನು ಸನ್ಮಾನಿಸಲಾಯಿತು.


ಶಿಬಿರಾರ್ಥಿಗಳ ಪರವಾಗಿ ವಂಶಿ ಭಟ್, ವರ್ಧಿನೀ, ಪ್ರಣಮ್ಯಾ ಜೈನ್, ಕಿಶೋರ್ ಪಾಟೀಲ್ ಹಾಗೂ ನಿರಂತ್ ಜೈನ್ ಅನಿಸಿಕೆ ವ್ಯಕ್ತಪಡಿಸಿದರು. ಅನುಷಾ ಹಾಗೂ ಮಹಾಲಕ್ಷ್ಮಿ ನಿರೂಪಿಸಿದರು. ಸಹ ಯೋಜನಾಧಿಕಾರಿ ಚೇತನಾ ಕುಮಾರಿ ಸ್ವಾಗತಿಸಿ, ಯೋಜನಾಧಿಕಾರಿ ಡಾ. ಪ್ರಸನ್ನಕುಮಾರ ಐತಾಳ್ ಧನ್ಯವಾದ ಅರ್ಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top