ಪುತ್ತೂರು: ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿ ಪರಿಷತ್ ಚುನಾವಣೆ ಬುಧವಾರ (ನ.16) ನಡೆಯಿತು. ಅಧ್ಯಕ್ಷರಾಗಿ ಮಂಜುನಾಥ ಜೋಡುಕಲ್ಲು, ಕಾರ್ಯದರ್ಶಿಯಾಗಿ ರಕ್ಷಿತ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ವಿಖ್ಯಾ ಆಯ್ಕೆಯಾದರು.
ಕಾಲೇಜು ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಮಧ್ಯಾಹ್ನ 1 ಗಂಟೆಗೆ ಮತದಾನ ನಡೆದು 3:30ರ ವೇಳೆಗೆ ಫಲಿತಾಂಶವೂ ಪ್ರಕಟವಾಯಿತು.
ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದಕ್ಕಾಗಿಯೇ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಚುನಾವಣೆ ನಡೆಸಲಾಗುತ್ತದೆ. ಒಳ್ಳೆಯ ನಾಯಕನನ್ನು ಆರಿಸುವುದು ನಮ್ಮ ಕರ್ತವ್ಯ. ಆಯ್ಕೆಯ ಅವಕಾಶ ಬಂದಾಗ ಒಂದು ಬಾರಿ ಯೋಚನೆ ಮಾಡಿ ಯಾರು ಉತ್ತಮ ನಾಯಕರಾಗಬಲ್ಲರು ಎಂಬುದನ್ನು ಚಿಂತಿಸಿ ಮತದಾನ ಮಾಡಬೇಕು ಎಂದು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನೂತನ ವಿದ್ಯಾರ್ಥಿ ಪರಿಷತ್ ನಾಯಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ವರದಿ: ಕೃತಿ ಬಲ್ಯಾಯ, ನೆಕ್ಕಿಲು
ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಕಾಲೇಜು ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ