ಉದ್ಯಾವರ್: ಇಲ್ಲಿನ ವಿಷ್ಣು ಶೆಣೈ ( ಶ್ರೀ ಕಾಶಿಮಠದಲ್ಲಿ ವ್ಯವಸ್ಥಾಪಕರಾಗಿದ್ದ ದಿವಂಗತ ಉದ್ಯಾವರ್ ವಾಮನ್ ಶೆಣೈ ಅವರ ಪುತ್ರ ಹಾಗೂ ಶೆಣೈ ಡೀಸೆಲ್ ಸರ್ವಿಸ್ ಇದರ ಮಾಲಕ ) ಅವರು ದಿನಾಂಕ 27. 11 .2022 ರಂದು ಅವರ ಮಗನ ಮನೆಯಲ್ಲಿ ತಮ್ಮ 92ನೇ ವರ್ಷದಲ್ಲಿ ದೈವಾಧೀನರಾದರು.
ಇವರು ಆಟೋಮೊಬೈಲ್ ಇಂಜಿನಿಯರ್ ಆಗಿದ್ದರು. ಅವರು 50 ಮತ್ತು 60ರ ದಶಕದಲ್ಲಿ ಕ್ರಿಕೆಟ್ ಆಟಗಾರರಾಗಿದ್ದು Mangalore Sports Club ಇದರ ಓಪನಿಂಗ್ ಬ್ಯಾಟ್ಸ್ ಮ್ಯಾನ್ ಆಗಿದ್ದರು.
ಅವರು ಮೂರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮಂಗಳೂರಿನ ಶಾಸಕ ಶ್ರೀ ವೇದವ್ಯಾಸ ಕಾಮತ್ ಹಾಗೂ ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್‌ನ ಶ್ರೀ ಕಸ್ತೂರಿ ಬಾಲಕೃಷ್ಣ ಪೈ ಅವರು ಶೆಣೈಯವರ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ