ಪಣಿಯಾಡಿ ಶೇಷಾಸನ ಲಕ್ಷ್ಮೀ ಅನಂತ ಪದ್ಮನಾಭ ದೇವಳದಲ್ಲಿ ಲಕ್ಷ ತುಳಸಿ ಅರ್ಚನೆ

Chandrashekhara Kulamarva
0


ಉಡುಪಿ: ಪುರಾಣ ಪ್ರಸಿದ್ಧ ಪಣಿಯಾಡಿ ಶೇಷಾಸನ ಲಕ್ಷ್ಮೀ ಅನಂತ ಪದ್ಮನಾಭ ದೇವಳದಲ್ಲಿ ನ. 13 ಭಾನುವಾರದಂದು ಕಾರ್ತಿಕ ಮಾಸದ ಶುಭಾವಸರದಲ್ಲಿ ಪ್ರಾತಃ ಕಾಲದಲ್ಲಿ ಶ್ರೀ ದೇವರಿಗೆ ಕಲಶಾಭಿಷೇಕದ ಜೊತೆಗೆ ಅನಂತ ವಿಪ್ರ ಬಳಗ ದಿಂದ ಶ್ರೀಮುರಳಿ ಕೃಷ್ಣ ತಂತ್ರಿಯವರ ಪ್ರಾಯೋಜಕ ತ್ವದಲ್ಲಿ ವಿಪ್ರ ಬಂಧುಗಳಿಂದ ವಿಷ್ಣು ಸಹಸ್ರ ನಾಮಾವಳಿ ಸಹಿತ ಲಕ್ಷ ತುಳಸಿ ಅರ್ಚನೆ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಕಡಿಯಾಳಿ, ಕರಂಬಳ್ಳಿ ಹಾಗೂ ಬೈಲೂರು ಇತ್ಯಾದಿ ವಿಪ್ರ ವಲಯದ ಬಂಧುಗಳೂ ಸೇರಿಕೊಂಡಿದ್ದರು. ಮಧ್ಯಾಹ್ನ ಅನ್ನ ಸಂತರ್ಪಣೆ ಬಳಿಕ ಸಂಜೆ ಶ್ರೀ ಪುತ್ತಿಗೆ ಮಠದ ವತಿಯಿಂದ ವಿಶೇಷ ದೀಪೋತ್ಸವಾದಿ ಸೇವೆಗಳು ನಡೆದವು.

ಈ ಸಂದರ್ಭದಲ್ಲಿ ತುಳಸೀ ಸಂಕೀರ್ತನೆ, ಭಜನೆ, ಅನಂತ ದೀಪಗಳ ರಾತ್ರಿ ದೀಪೋತ್ಸವದ ಜೊತೆ ರಂಗಪೂಜೆ, ಅಷ್ಟಾವಧಾನ, ಪಲ್ಲಕ್ಕಿಉತ್ಸವ ಸೇವೆ, ಉತ್ಸವ ಬಲಿ, ಸಿಡಿಮದ್ದು ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳು ಭಕ್ತ ಜನ ಸಾಗರದ ನಡುವೆ ಋತ್ವಿಜರಾದ ಶ್ರೀ ವಾದಿರಾಜ ತಂತ್ರಿ ಹಾಗೂ ಪ್ರಧಾನ ಅರ್ಚಕ ಶ್ರೀ ರಾಘವೇಂದ್ರ ಭಟ್‌ರವರ ನೇತೃತ್ವದಲ್ಲಿ ಸಾಂಗವಾಗಿ ಬಹಳ ವಿಜೃಂಭಣೆಯಿಂದ ನೆರವೇರಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top