ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ, ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್ ನ ಬಿಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ನವೆಂಬರ್ 17 2022 ರಂದು ಮಂಗಳೂರಿನ ಹೋಟೆಲ್ ಸ್ಯಾಫ್ರನ್‌ನಲ್ಲಿ “ಸ್ಕಿಲ್ ಅಪ್ ವಿತ್ ಬಡೆಕ್ಕಿಲ ಪ್ರದೀಪ್” ಕಾರ್ಯಾಗಾರ ನಡೆಯಿತು.
ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿ ಡಾ.ಪಿ.ಎಸ್.ಐತಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಗ್ ಬಾಸ್ ಕನ್ನಡದ ಧ್ವನಿ, ನಿರೂಪಕ, ವಾಯ್ಸ್‌ಓವರ್ ಕಲಾವಿದ, ನಟ, ಬರಹಗಾರ ಮತ್ತು ಪಾಡ್‌ಕಾಸ್ಟರ್ ಬಡೆಕ್ಕಿಲ ಪ್ರದೀಪ್ ಆಂಕರಿಂಗ್, ವಾಯ್ಸ್ ಓವರ್ ಮತ್ತು ಸಂವಹನದ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಕಾರ್ಯಕ್ರಮದ ಸಂಚಾಲಕ ಪ್ರೊ. ಶ್ರೀರಾಜ್ ಎಸ್.ಆಚಾರ್ಯ, ಅಸೋಸಿಯೇಟ್ ಪ್ರೊಫೆಸರ್ ಡಾ.ಪ್ರದೀಪ್ ಎಂ.ಡಿ., ಅಸೋಸಿಯೇಟ್ ಪ್ರೊಫೆಸರ್ ಡಾ.ವಿದ್ಯಾ ಎನ್., ಪ್ರೊ. ಜಾಯ್ಸನ್ ಕಾರ್ಡೋಜಾ, ಪ್ರೊ. ಸುಶ್ಮಿತಾ ಎಸ್.ಕೋಟ್ಯಾನ್, ರಿವರ್ಬ್ ಸ್ಪೇಸ್ ಇಂಕ್ ಪ್ರಾಜೆಕ್ಟ್ ಮ್ಯಾನೇಜರ್ ಶರಧಿ ಆರ್. ಫಡ್ಕೆ ಉಪಸ್ಥಿತರಿದ್ದರು.
ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಅಂಡ್ ಹ್ಯುಮಾನಿಟೀಸ್ ನ ಡೀನ್ ಡಾ. ಲವೀನಾ ಡಿಮೆಲ್ಲೋ ಸ್ವಾಗತಿಸಿ, ವಿದ್ಯಾರ್ಥಿನಿ ಜಿಷ್ನಾ ಬಾಲಕೃಷ್ಣ ವಂದಿಸಿದರು. ವಿದ್ಯಾರ್ಥಿನಿ ವಿದ್ಯಾಶ್ರೀ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ