ಒಡಿಯೂರು ಶ್ರೀ ಸಂಸ್ಥಾನ: ಡಿ. 1ರಿಂದ 7 ತನಕ ಶ್ರೀ ದತ್ತ ಜಯಂತಿ ಮಹೋತ್ಸವ

Upayuktha
0

* ಶ್ರೀ ದತ್ತ ಮಹಾಯಾಗ ಸಪ್ತಾಹ


* ಒಡಿಯೂರು ತುಳು ನಾಟಕೋತ್ಸವ - ತುಳು ನಾಟಕ ಸ್ಪರ್ಧೆ


* ಹರಿಕಥಾ ಸತ್ಸಂಗ ಸಪ್ತಾಹ


ಒಡಿಯೂರು: ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದಶಂಬರ 1ರಿಂದ 7ರ ತನಕ ಶ್ರೀದತ್ತ ಜಯಂತಿ ಮಹೋತ್ಸವ ನಡೆಯಲಿದೆ. ಶ್ರೀದತ್ತ ಮಹಾಯಾಗ ಸಪ್ತಾಹವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ದಶಂಬರ 1ರಂದು ಬೆಳಗ್ಗೆ ಘಂಟೆ 9.00ರಿಂದ ಶ್ರೀ ಗಣಪತಿ ಹವನ, ನಾಗತಂಬಿಲ, ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ, ಘಂಟೆ 9.30ರಿಂದ ಪೂಜ್ಯ ಶ್ರೀಗಳವರ ದಿವ್ಯೋಪಸ್ಥಿತಿಯಲ್ಲಿ ಶ್ರೀ ದತ್ತಮಾಲಾಧಾರಣೆ. ಘಂಟೆ 10.30ಕ್ಕೆ ಹರಿಕಥಾ ಸತ್ಸಂಗ ಸಪ್ತಾಹ ಉದ್ಘಾಟನೆ. ಮಧ್ಯಾಹ್ನ ಘಂಟೆ 12.30ರಿಂದ ಮಹಾಪೂಜೆ ಬಳಿಕ ಮಹಾಸಂತರ್ಪಣೆ ನಡೆಯಲಿದೆ.


ಅಪರಾಹ್ನ 2.00ಘಂಟೆಗೆ ಒಡಿಯೂರು ತುಳು ನಾಟಕೋತ್ಸವ - ತುಳು ನಾಟಕ ಸ್ಪರ್ಧೆ ಉದ್ಘಾಟನೆ ನೆರವೇರಲಿದೆ. ಸಂಜೆ ಘಂಟೆ 6.00ರಿಂದ ಶ್ರೀ ದತ್ತಾಂಜನೇಯ ದೇವರ ಪಲ್ಲಕ್ಕಿ ಉತ್ಸವ, ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಜರುಗಲಿದೆ.


ದಶಂಬರ 1ರಿಂದ 7ರ ತನಕ ಪ್ರತಿದಿನ ಬೆಳಿಗ್ಗೆ ವೇದ-ಗುರುಚರಿತ್ರೆ ಪಾರಾಯಣ ನಡೆಯಲಿದ್ದು, ಘಂಟೆ 10.30ರಿಂದ ವಿವಿಧ ಹರಿದಾಸರಿಂದ ಹರಿಕಥಾ ಸತ್ಸಂಗ ಜರುಗಲಿದೆ. ಎಂದಿನಂತೆ ಮಧ್ಯಾಹ್ನ ಘಂಟೆ 12.30ಕ್ಕೆ ಮಹಾಪೂಜೆ, ಮಹಾಸಂತರ್ಪಣೆ ನಡೆಯಲಿದೆ. ಅಪರಾಹ್ನ ಘಂಟೆ 2.00ರಿಂದ ರಾತ್ರಿ ಘಂಟೆ 10ರ ತನಕ ತುಳು ನಾಟಕ ಸ್ಪರ್ಧೆ, ರಾತ್ರಿ ಘಂಟೆ 7.00ರಿಂದ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ ನೆರವೇರಲಿದೆ.


'ಶ್ರೀ ದತ್ತಮಾಲಾಧಾರಣೆ'


ಶ್ರೀ ಗುರುದತ್ತಾತ್ರೇಯರ ಅವತಾರ ವಿಶೇಷ. ಸಮರಸ ತತ್ತ್ವವನ್ನು ಜಗತ್ತಿಗೆ ಸಾರಿ ವಿಶ್ವ ಮಾನವ ಧರ್ಮದ ಅರಿವು ಮೂಡಿಸುವುದೇ ಆಗಿದೆ. ಇಂತಹ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸಿದ್ಧರಿರುವ ಗುರುಭಜಕರಿಗೆ ‘ಮಾಲಾಧಾರಣೆ’ ಮತ್ತು ಸಪ್ತಾಹ ಪರ್ಯಂತ ವ್ರತಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಅಪೇಕ್ಷಿತರು ತಾ.01-12-2022ನೇ ಬುಧವಾರ ಬೆಳಗ್ಗೆ 9.00ಗಂಟೆಗೆ ಶ್ರೀ ಸಂಸ್ಥಾನದಲ್ಲಿ ಹಾಜರಿರುವುದು. ಮುದ್ರೆ ಸಹಿತ ದತ್ತಮಾಲೆ ಶ್ರೀ ಸಂಸ್ಥಾನದ ಸೇವಾ ವಿಭಾಗದಲ್ಲಿ ಲಭ್ಯವಿರುವುದು.


ನಿಯಮಗಳು: ಎರಡು ಹೊತ್ತು ಸ್ನಾನ, ಏಕಭುಕ್ತ್ತರಾಗಿ (ಒಂದು ಹೊತ್ತು ಊಟ), ಸಾತ್ವಿಕರಾಗಿ, ತ್ರಿಕರಣಪೂರ್ವಕ ಶ್ರೀ ಗುರುದತ್ತಾತ್ರೇಯರ ಸ್ಮರಣೆಯೊಂದಿಗೆ ನಿತ್ಯ ಕಾರ್ಯಗಳಲ್ಲಿ ತೊಡಗುವುದು. ಗುರುಚರಿತ್ರೆ ಪಾರಾಯಣವೂ ಮಾಡಬಹುದು.


ಹರಿಕಥಾ ಸತ್ಸಂಗ ಸಪ್ತಾಹ:


ತಾ.01-12-2022 ಗುರುವಾರ - ‘ಶ್ರೀ ದತ್ತಾವತಾರ’ - ಕಲಾರತ್ನ ಶ್ರೀ ಶಂ.ನಾ. ಅಡಿಗ ಕುಂಬ್ಳೆ


ತಾ.02-12-2022ಶುಕ್ರವಾರ - ‘ಭಗವಾನ್ ಶ್ರೀನಿತ್ಯಾನಂದ ಸ್ವಾಮಿ ಮಹಾತ್ಮ್ಯೆ’-ಶ್ರೀ ಪಿ.ವಿ.ರಾವ್ ಸುರತ್ಕಲ್


ತಾ.03-12-2022 ಶನಿವಾರ - ‘ಹನುಮದ್ವಿಲಾಸ’ - ಶ್ರೀ ವೈ. ಅನಂತಪದ್ಮನಾಭ ಭಟ್ ಕಾರ್ಕಳ


ತಾ.04-12-2022 ಆದಿತ್ಯವಾರ - ‘ಸಮರ್ಥ ರಾಮದಾಸ’ - ಪೊಳಲಿ ಶ್ರೀ ಜಗದೀಶ ದಾಸರು


ತಾ.05-12-2022 ಸೋಮವಾರ - ‘ಸಂತ ಜ್ಞಾನೇಶ್ವರ’ - ಶ್ರೀ ಈಶ್ವರದಾಸ ಕೊಪ್ಪೇಸರ


ತಾ.06-12-2022 ಮಂಗಳವಾರ - ‘ಭಕ್ತ ಅಂಬರೀಷ’ - ಶ್ರೀಮತಿ ಶ್ರದ್ಧಾ ಭಟ್ ನಾಯರ್ಪಳ್ಳ


ತಾ.07-12-2022 ಬುಧವಾರ - 'ಅವಧೂತೋಪಖ್ಯಾನ' - ಡಾ. ಪಿ.ಎಸ್.ಗುರುದಾಸ್, ಮಂಗಳೂರು


ಒಡಿಯೂರು ತುಳು ನಾಟಕೋತ್ಸವ - ತುಳು ನಾಟಕ ಸ್ಪರ್ಧೆ


ತಾ. 01-12-2022 ಗುರುವಾರ ಅಪರಾಹ್ನ ಘಂಟೆ 2.00ರಿಂದ ಸಂಗಮ ಕಲಾವಿದೆರ್, ಕುಡ್ಲ - 'ಅಹಲ್ಯೆ'

ರಚನೆ: ಕದ್ರಿ ನವನೀತ ಶೆಟ್ಟಿ ನಿರ್ದೇಶನ: ನಾಗೇಶ್ ದೇವಾಡಿಗ


ಸಂಜೆ ಘಂಟೆ 5.00ರಿಂದ - ವಾರಾಹಿ ಯುವಕ ಸಂಘ ಉಡಲ್ ಕಲಾವಿದೆರ್ ಕನ್ಯಾನ - 'ಸತ್ಯ ಗೊತ್ತಾನಗ'

ರಚನೆ: ಶಶಿಧರ ಶೆಟ್ಟಿ ಬಂಡಿತ್ತಡ್ಕ - ನಿರ್ದೇಶನ: ರಾಜಶೇಖರ ಶೆಟ್ಟಿ


ರಾತ್ರಿ ಘಂಟೆ 8.00ರಿಂದ ಸಂತೋμï ಕಲಾವಿದೆರ್ ಪಾವಳ, ವರ್ಕಾಡಿ - 'ಅಂಚಾಯಿನೆಟ್ ಇಂಚಾಂಡ್'

ರಚನೆ: ಚೇತನ್ ವರ್ಕಾಡಿ - ನಿರ್ದೇಶನ: ನಿತಿನ್ ಹೊಸಂಗಡಿ


ತಾ.02-12-2022 ಶುಕ್ರವಾರ ಅಪರಾಹ್ನ ಘಂಟೆ 2.00ರಿಂದ ತಾಂಬೂಲ ಕಲಾವಿದೆರ್, ಪುಂಜಾಲ್‍ಕಟ್ಟೆ -

'ಅಂಚಲಾ ಉಂಡಾ?' ರಚನೆ - ನಿರ್ದೇಶನ: ರಾಘವೇಂದ್ರ ಕಾರಂತ್ ಮೊಗರ್ನಾಡು


ಸಂಜೆ ಘಂಟೆ 5.00ರಿಂದ ಅಭಿನವ ಕಲಾವಿದೆರ್ ಕಾರ್ಲ, ಪೆರ್ವಾಜೆ - 'ಗುರ್ಕಾರೆ ಗುವೆಲ್ಡ್'

ರಚನೆ: ಸುರೇಂದ್ರ ಕುಮಾರ್ ಕಲತ್ರಪಾದೆ - ನಿರ್ದೇಶನ: ವಸಂತ ಗುಡಿಗಾರ್


ರಾತ್ರಿ ಘಂಟೆ 8.00ರಿಂದ ಬಂಟವಾಳದ ಕಲಾವಿದೆರ್ - 'ಅಮರ್ ಸಿರಿಕುಲು', ರಚನೆ - ನಿರ್ದೇಶನ: ಪರಮಾನಂದ ಸಾಲ್ಯಾನ್


ತಾ.03-12-2022 ಶನಿವಾರ ಅಪರಾಹ್ಣ ಘಂಟೆ 2.00ರಿಂದ ಕಲಾಚಾವಡಿ, ಅಂಬಲಪಾಡಿ - 'ಮೋಕೆದ ಮದಿಮಾಲ್' ರಚನೆ: ನವೀನ್ ಸಾಲ್ಯಾನ್ ಪಿತ್ರೋಡಿ - ನಿರ್ದೇಶನ: ಪ್ರಭಾಕರ ಆಚಾರ್ಯ ಮೂಡುಬೆಳ್ಳೆ


ಸಂಜೆ ಘಂಟೆ 5.00ರಿಂದ ಕೂಡ್ದಿ ಕಲಾವಿದೆರ್, ಪೆರ್ಡೂರು - 'ಬಯ್ಯಮಲ್ಲಿಗೆ'

ರಚನೆ: ಡಾ. ಸಂಜೀವ ದಂಡಕೇರಿ - ನಿರ್ದೇಶನ: ರಮೇಶ್ ಆಚಾರ್ಯ


ರಾತ್ರಿ ಘಂಟೆ 8.00ರಿಂದ ಮಂಗಳಾ ಕಲಾವಿದೆರ್, ಮಂಗಳಾದೇವಿ - 'ಕಟ್ಟೆದ ಗುಳಿಗೆ ಕೈ ಬುಡಯೆ'

ರಚನೆ - ನಿರ್ದೇಶನ: ಅಶೋಕ್ ಶೆಟ್ಟಿ


ತಾ.04-12-2022 ಆದಿತ್ಯವಾರ ಅಪರಾಹ್ಣ ಘಂಟೆ 2.00ರಿಂದ ಸುಮನಸೌ ಕೊಡವೂರು - ಕಾಪ

ರಚನೆ: ಬಾಲಕೃಷ್ಣ ಶಿಬಾರ್ಲ £ರ್ದೇಶನ: ದಿವಾಕರ ಕಟೀಲ್


ಸಂಜೆ ಘಂಟೆ 5.00ರಿಂದ ಘಳಿಗೆ ಕಲಾವಿದೆರ್, ನೂರಾಲ್‍ಬೆಟ್ಟು - ಬಾಕಿಲ್ ದೆಪ್ಪೊಡ್ಚಿ

ರಚನೆ - ನಿರ್ದೇಶನ: ರಮೇಶ್ ಆಚಾರ್ಯ ನೂರಾಲ್‍ಬೆಟ್ಟು


ರಾತ್ರಿ ಘಂಟೆ 8.00ರಿಂದ ಸಾರ್ವಜನಿಕ ಶ್ರೀ ಶಾರದೋತ್ಸವ ನಾಡಹಬ್ಬ ಸಮಿತಿ ಕೈರಂಗಳ - 'ದೇವು ಪೂಂಜ'

ರಚನೆ: ಅನಂತರಾಮ ಬಂಗಾಡಿ ನಿರ್ದೇಶನ: ಸೋಮನಾಥ ಉಚ್ಚಿಲ


ತಾ.05-12-2022 ಸೋಮವಾರ ಅಪರಾಹ್ಣ ಘಂಟೆ 2.00ರಿಂದ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ.ಕಾಲೇಜು ಸುಬ್ರಹ್ಮಣ್ಯ - 'ಅಮರಸಂಗ್ರಾಮ 1837'

ರಚನೆ - ನಿರ್ದೇಶನ: ಸಾಯಿನಾರಾಯಣ ಕಲ್ಮಡ್ಕ


ಸಂಜೆ ಘಂಟೆ 5.00ರಿಂದ ಕಲಾಗ್ರಾಮ ಕಲ್ಮಡ್ಕ - 'ಮಾಯಾಸಂಕೋಲೆ'

ರಚನೆ: ಡಾ. ಚಂದ್ರಶೇಖರ ಕಂಬಾರ - ನಿರ್ದೇಶನ: ಸಾಯಿನಾರಾಯಣ


ರಾತ್ರಿ ಘಂಟೆ 8.00ರಿಂದ ಜರ್ನಿ ಥೇಟರ್ ಗ್ರೂಪ್ (ರಿ), ಮಂಗಳೂರು - 'ಗೋಂದೊಳು'

ರಚನೆ: ಪ್ರೊ. ಅಮೃತ ಸೋಮೇಶ್ವರ - ನಿರ್ದೇಶನ: ವಿದ್ದು ಉಚ್ಚಿಲ್


ತಾ.06-12-2022 ಮಂಗಳವಾರ ಅಪರಾಹ್ನ ಘಂಟೆ 2.00ರಿಂದ ಸರಕಾರಿ ನೌಕರರ ಕಲಾ ಮತ್ತು ಸಾಂಸ್ಕೃತಿಕ ಸಂಘ, ಮಂಗಳೂರು - 'ಅಕ್ಕಮಹಾದೇವಿ'

ರಚನೆ: ನಿರ್ದೇಶನ: ಯು. ಸತೀಶ್ ಶೆಣೈ


ಸಂಜೆ ಘಂಟೆ 5.00ರಿಂದ ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ - 'ಪಟ್ಟೆ ತತ್ತ್‍ಂಡ'

ರಚನೆ: ಜಿ. ಶ್ರೀನಿವಾಸ - ನಿರ್ದೇಶನ: ಸುಕುಮಾರ ಮೋಹನ್


ರಾತ್ರಿ ಘಂಟೆ 8.00ರಿಂದ ಕಲಾಶ್ರೀ ಬೆದ್ರ ಕುಸಲ್ದ ಕಲಾವಿದೆರ್ - 'ನಾಲಾಯಿ ಮಗುರುಜಿ'

ರಚನೆ - ನಿರ್ದೇಶನ: ಸಂದೀಪ್ ಶೆಟ್ಟಿ ರಾಯಿ. ಹೀಗೆ ಒಟ್ಟು 18 ನಾಟಕಗಳು ನಡೆಯಲಿದೆ.


ಬಹುಮಾನಗಳು:

ಪ್ರಥಮ: ರೂ. 30,000

ದ್ವಿತೀಯ: ರೂ. 20,000

ತೃತೀಯ: ರೂ. 10,000 ಹಾಗೂ ಶಾಶ್ವತ ಫಲಕಗಳು.


ಅತ್ಯುತ್ತಮ ನಟ, ನಟಿ, ಪೋಷಕ ಪಾತ್ರ, ಸಂಗೀತ ನಿರ್ದೇಶಕ, ರಂಗ ನಿರ್ಮಾಣ, ನಿರ್ದೇಶಕ, ಉತ್ತಮ

ಕೃತಿಗೆ, ವೇಷ ಭೂಷಣಕ್ಕೆ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top