ಪುತ್ತೂರು: ಮೊಡಂಕಪಿನ ಕಾರ್ಮೆಲ್ ಬಾಲಕಿಯರ ಪ್ರೌಢಶಾಲೆಯಲ್ಲಿ ನವೆಂಬರ್ ಹತ್ತರಂದು ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ– 2022 ನಲ್ಲಿ ಪುತ್ತೂರಿನ ಸುದಾನ ವಸತಿ ಶಾಲೆಯ ವಿದ್ಯಾರ್ಥಿನಿ ರಿಶೇಲ್ ಎಲ್ಸಾ ಬೆನ್ನಿ (9ನೇ) ತೃತೀಯ ಬಹುಮಾನವನ್ನು ಪಡೆದಿದ್ದಾಳೆ.
ಬಯೋಸೈನ್ಸ್, ಬಯೋಕೆಮಿಸ್ಟ್ರಿ ಮತ್ತು ಪರಿಸರ ವಿಜ್ಞಾನ ವಿಷಯದಲ್ಲಿ 'ಇಂಟಿಗ್ರೇಟೆಡ್ ಸರ್‌ಕ್ಯುಲರ್ ಪಿರಮಿಡ್ ಫಾರ್ಮಿಂಗ್' (Integrated Circular Pyramid Farming) ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿದ್ದಾರೆ.
ಈಕೆ ಶ್ರೀಯುತ ಬೆನ್ನಿಚನ್‌ವಿ ಮತ್ತು ಶ್ರೀಮತಿ. ಸುನೀತಾ ಕೆ. ಎಸ್ ಅವರ ಪುತ್ರಿ. ಸುದಾನ ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ. ಶಾರದ ಪಿ ಮತ್ತು ಶ್ರೀಮತಿ. ರೇಖಾಮಣಿ ಪಿ. ವಿಜ್ಞಾನ ಮಾದರಿ ತಯಾರಿಗೆ ಮಾರ್ಗದರ್ಶನ ಮಾಡಿದ್ದರು.
ಈ ಸ್ಪರ್ಧೆಯು ದ.ಕ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತುತರಬೇತಿ ಸಂಸ್ಥೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ, ಕಾರ್ಮೆಲ್ ಬಾಲಕಿಯರ ಪ್ರೌಢಶಾಲೆ ಮೊಡಂಕಾಪು ಇದರ ಸಂಯುಕ್ತ ಆಶ್ರಯದಲ್ಲಿ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ