ರಾಮಾಯಣ ಕಥಾ ಪ್ರವಚನ ಸಮಾಪನ

Upayuktha
0

ಮಂಗಳೂರು: ನಗರದ ಗುಜರಾಥಿ ಸಮಾಜದ ವತಿಯಿಂದ ಮಂಗಳೂರಿನ ಶ್ರೀ ಜಲರಾಮ ದೇವಸ್ಥಾನದಲ್ಲಿ ಗುಜರಾಥದ ಪ್ರಸಿದ್ಧ ಸ್ವಾಮೀಜಿ ಹಾಗೂ ವಿದ್ವಾಂಸ ಮಹೇಶ್ಚಂದ್ರ ಪ್ರತಾಪರಾಯ್ ರಾವಲ್ ಅವರಿಂದ ಒಂಬತ್ತು ದಿನಗಳ ಕಾಲ ಶ್ರೀರಾಮಾಯಣ ಕಥಾ ಪ್ರವಚನ ಜರಗಿತು.


ಅಂತಿಮ ದಿನವಾದ ಸೋಮವಾರದಂದು (ದಿನಾಂಕ 21 ರಂದು) ಮಂಗಳೂರಿನ ಶ್ರೀ ಅಮೃತಾನಂದಮಯಿ ಸೇವಾ ಸಮಿತಿ ವತಿಯಿಂದ ಸ್ವಾಮೀಜಿಯವರಿಗೆ ಗೌರವಾರ್ಪಣೆ ಮಾಡಲಾಯಿತು. ಸೇವಾ ಸಮಿತಿ ಅಧ್ಯಕ್ಷರಾದ ಕವಿ– ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಸ್ವಾಮೀಜಿಯವರನ್ನು ಶಾಲು ಹಾಕಿ ಫಲಪುಷ್ಪ ಹಾಗೂ ನೆನಪಿನ ಕಾಣಿಕೆಗಳೊಂದಿಗೆ ಗೌರವಿಸಿದರು.


ಮಠದ ಭಕ್ತರಾದ ವಿ. ಎಲ್. ರೇಗೋ, ಗುಜರಾಥಿ ಸಮಾಜದ ಮುಖ್ಯರಾದ ಪಂಕಜ್ ವಸಾನಿ ಮತ್ತು ಪ್ರಕಾಶ್ ಥಕ್ಕರ್ ಅವರನ್ನು ಚಿತ್ರದಲ್ಲಿ ಕಾಣಬಹುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top