ಪುತ್ತೂರು: ವಿವೇಕಾನಂದ ಪದವಿ ಕಾಲೇಜಿನ (ಸ್ವಾಯುತ್ತ) ಸಮಾಜಶಾಸ್ತ್ರ ವಿಭಾಗದ ವಿದ್ಯಾಥಿ೯ಗಳು ಪುತ್ತೂರಿನ ಮಹಿಳಾ ಪೋಲಿಸ್ ಠಾಣೆಗೆ ಶನಿವಾರ (ನ.19) ಭೇಟಿ ನೀಡಿದ್ದರು. ಈ ಸಂದಭ೯ದಲ್ಲಿ ಠಾಣೆಯ ಅಧಿಕಾರಿ ಆಗಿರುವ ಮಧುಸೂಧನ್ ರಾವ್ ಅವರು ತಮ್ಮ ಕಾಯ೯ವೈಖರಿಯ ಬಗ್ಗೆ ಮಾಹಿತಿ ನೀಡಿ ವಿದ್ಯಾಥಿ೯ಗಳಿಗೆ ಕಾಯ್ದೆಗಳ ಬಗ್ಗೆ, ಸಾಮಾಜಿಕ ಜಾಲತಾಣಗಳಿಂದಾಗುವ ಅವಗಢಗಳ ಬಗ್ಗೆ ಉತ್ತಮ ಮಾಹಿತಿಗಳನ್ನು ನೀಡುವುದರ ಮೂಲಕ ಮಕ್ಕಳಲ್ಲಿ ಜಾಗ್ರತಿಯನ್ನು ಮೂಡಿಸಿದರು.
ತಮ್ಮ ಅಮೂಲ್ಯವಾದ ಸಮಯದಲ್ಲಿ ಮಕ್ಕಳ ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು. ಈ ಸಂದಭ೯ದಲ್ಲಿ ಪಿ.ಯಸ್.ಐ ಶ್ರೀಮತಿ ಸೇಸಮ್ಮ ಹಾಗೂ ಸಿಬ್ಬಂದಿ ವಗ೯ದವರು ಹಾಗೂ ಸಮಾಜಶಾಸ್ತ್ರದ ಮುಖ್ಯಸ್ಥೆ ಆಗಿರುವ ಶ್ರೀಮತಿ ವಿದ್ಯಾ.ಎಸ್ ಅವರು ಉಪಸ್ಥಿತರಿದ್ದರು. ಕೊನೆಯದಾಗಿ ಸಮಾಜಶಾಸ್ತ್ರದ ಮುಖ್ಯಸ್ಥೆ ವಿದ್ಯಾ ಅವರು ಧನ್ಯವಾದವನ್ನು ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ