ಬದಿಯಡ್ಕ: ಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳವರು, ಶ್ರೀಸಂಸ್ಥಾನಗೋಕರ್ಣ ಇವರ ದಿವ್ಯಾನುಗ್ರಹದ ಮುಳ್ಳೇರಿಯ ಮಂಡಲಾಂತರ್ಗತ ಪಳ್ಳತ್ತಡ್ಕ ಹವ್ಯಕ ವಲಯದ ನವಂಬರ್ ತಿಂಗಳ ವಲಯ ಸಭೆಯು ಪಳ್ಳತ್ತಡ್ಕ ಮುದ್ದುಮಂದಿರದಲ್ಲಿ ಇಂದು ಭಾನುವಾರ (ನವಂಬರ್ 6) ಜರಗಿತು.
ಧ್ವಜಾರೋಹಣ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಆರಂಭವಾಯಿತು. ವಲಯ ಅಧ್ಯಕ್ಷ ಪರಮೇಶ್ವರ ಭಟ್ ಪೆರುಮುಂಡ ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ ಗತಸಭೆಯ ವರದಿ ಮತ್ತು ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ನಾರಾಯಣ ಮೂರ್ತಿ ಗುಣಾಜೆ ಲೆಕ್ಕಪತ್ರ ಮಂಡಿಸಿದರು.
ಮುಳ್ಳೇರಿಯ ಮಂಡಲ ಅಧ್ಯಕ್ಷರಾದ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ವಲಯದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ಮಂಡಲ ವ್ಯಾಪ್ತಿಯಲ್ಲಿ ಯುವ ಕ್ರೀಡೋತ್ಸವ ಮತ್ತು ವಿದ್ಯಾರ್ಥಿ ಪ್ರತಿಭಾ ಪ್ರದರ್ಶನ ಜರಗಲಿದ್ದು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಂಡಲ ಯುವ ವಿಭಾಗ ಮುಖ್ಯಸ್ಥರಾದ ಕೇಶವಪ್ರಕಾಶ ಮುಣ್ಚಿಕಾನ ತಿಳಿಸಿದರು.
ಮಾತೃವಿಭಾಗದ ವಿದ್ಯಾಗೌರಿ ಉಪ್ಪಂಗಳ ವಿವಿಧ ಉಪಾಸನೆಗಳ ಬಗ್ಗೆ ಮಾಹಿತಿ ನೀಡಿದರು. ಮಾಣಿಮಠದಲ್ಲಿ ಶಿಲಾಮಯ ಗರ್ಭಗುಡಿ ನಿರ್ಮಾಣ ಚಟುವಟಿಕೆಯಲ್ಲಿ ಎಲ್ಲ ಹಂತಗಳಲ್ಲಿಯೂ ತೊಡಗಿಕೊಳ್ಳುವಂತೆ ತಿಳಿಸಲಾಯಿತು.
ವಲಯ ಮತ್ತು ವಲಯದ ಹೊರಗಿನ ದೇವಸ್ಥಾನಗಳಲ್ಲಿ ರುದ್ರ ಪಾಠಕರು ನಿರಂತರವಾಗಿ ತೊಡಗಿಕೊಳ್ಳುವುದನ್ನು ಶ್ಲಾಘಿಸಲಾಯಿತು. ಗುರಿಕ್ಕಾರರು,ಪದಾಧಿಕಾರಿಗಳು ಸೇರಿ 39ಮಂದಿ ಭಾಗವಹಿಸಿದರು.
ರಾಮತಾರಕ ಮಂತ್ರ, ಶಾಂತಿ ಮಂತ್ರ ಧ್ವಜಾವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


