ಕೆನರಾ ಕಾಲೇಜಿನಲ್ಲಿ 'ರಾಷ್ಟ್ರೀಯ ಏಕತಾ ದಿವಸ'

Upayuktha
0

ಮಂಗಳೂರು: ಕೆನರಾ ಕಾಲೇಜು ಇಲ್ಲಿನ ಸಭಾಂಗಣದಲ್ಲಿ ರಾಷ್ಟ್ರೀಯ ಏಕತಾ ದಿವಸವನ್ನು ಆಚರಿಸಲಾಯಿತು. ಸರ್ದಾರ್ ವಲ್ಲಭ ಭಾಯ್ ಪಟೇಲರು ಮೃದು ಹಾಗೂ ಕಠಿಣ ಧೋರಣೆಯ ಗುಣಗಳನ್ನು ಹೊಂದಿದ್ದರು. ಅವರ ಧೈರ್ಯ, ಬದ್ಧತೆ, ಪ್ರೀತಿ, ಶಿಸ್ತು, ದೇಶ ಭಕ್ತಿ ಇವೆಲ್ಲವೂ ಇಂದಿನ ಯುವ ಜನರಿಗೆ ಪ್ರೇರಣೆಯಾಗಿದೆ ಎಂದು ನಿವೃತ್ತ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಭಾರತದ ಉಕ್ಕಿನ ಮನುಷ್ಯನ ವ್ಯಕ್ತಿತ್ವವನ್ನು ನೆನಪಿಸಿಕೊಂಡು ದೇಶದ ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯಬೇಕೆಂದು ನುಡಿದರು.


ಕಾಲೇಜು ಪ್ರಾಂಶುಪಾಲೆ ಡಾ. ಪ್ರೇಮಲತಾ.ವಿ ಅಧ್ಯಕ್ಷತೆ ವಹಿಸಿದ್ದು ಏಕತಾ ಪ್ರತಿಜ್ಞೆಯನ್ನು ಬೋಧಿಸಿದರು. ಉಪನ್ಯಾಸಕ ಶ್ರೀ ಹಾರ್ದಿಕ್ ಚೌಹಾಣ್ ದಿನದ ಮಹತ್ವವನ್ನು ತಿಳಿಸಿದರು. ಶ್ರೀಮತಿ ದೇಜಮ್ಮ ಸ್ವಾಗತಿಸಿ, ಅನುಶ್ರೀ ವಂದಿಸಿದರು. ಮೇಘನಾ ರಮೇಶ್ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top