ವಿವಿ ಸಂಧ್ಯಾ ಕಾಲೇಜಿನಲ್ಲಿ “ರಾಷ್ಟ್ರೀಯ ಐಕ್ಯತಾ” ದಿನಾಚರಣೆ

Upayuktha
0

ಮಂಗಳೂರು: ಮಂಗಳೂರಿನ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಎನ್.ಎಸ್.ಎಸ್ ಘಟಕವು ಶಿವರಾಮ ಕಾರಂತ ಭವನದಲ್ಲಿ ಶನಿವಾರದಂದು ರಾಷ್ಟ್ರೀಯ ಐಕ್ಯತೆ ಎಂಬ ವಿಷಯದ ಕುರಿತು ಉಪನ್ಯಾಸ ಆಯೋಜಿಸಿತ್ತು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ, ಮಂಗಳೂರು ವಿಶ್ವವಿದ್ಯಾನಿಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸದಸ್ಯೆ ಮತ್ತು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾಗಿರುವ ಧನಲಕ್ಷ್ಮಿ ಗಟ್ಟಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


“ವಿವಿಧತೆಯಲ್ಲಿ ಏಕತೆ ಯನ್ನು ಸಾಧಿಸಿದ ನಮ್ಮ ದೇಶದ ಬಗ್ಗೆ ಹೆಮ್ಮೆಯಿರಲಿ. ನಮ್ಮ ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳು, ಸಂಸ್ಕಾರ ಮತ್ತು ನಂಬಿಕೆಗಳನ್ನು ಅನುಸರಿಸಿಕೊಂಡು, ಸಮಗ್ರತೆಯೊಂದಿಗೆ ನಮ್ಮ ರಾಷ್ಟ್ರವನ್ನು ಉತ್ಕೃಷ್ಟ ವೈಭವಕ್ಕೆ ಕೊಂಡೊಯ್ಯಬೇಕು,” ಎಂದರು.


ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಪ್ರತಿಯೊಂದು ಉದಾತ್ತ ವಿಷಯದಲ್ಲೂ ವ್ಯಾಪ್ತಿಯನ್ನು ಕಾಣಬೇಕು, ಇತರರನ್ನು ಗೌರವಿಸಬೇಕು ಮತ್ತು ನಮ್ಮ ಮನಸ್ಸನ್ನು ಪರಿಶುದ್ಧವಾಗಿಡಬೇಕು ಎಂದು ಸಲಹೆ ನೀಡಿದರು.


ನಾವು ಮಾನವೀಯತೆ, ಸತ್ಯ ಮತ್ತು ಸದ್ಭಾವನೆಯ ಉಪಯುಕ್ತ ಸಾಧನವಾಗಬೇಕು. ಸ್ವಲ್ಪದಿಂದ ಪ್ರಾರಂಭಿಸಿ ಮತ್ತು ಅದು ಫಲಪ್ರದ ಮರವಾಗಿ ಬೆಳೆಯುತ್ತದೆ ಸಲಹೆಯಿತ್ತರು.


ಕನ್ನಡ ಉಪನ್ಯಾಸಕಿ ಹಾಗೂ ಎನ್.ಎಸ್.ಎಸ್ ಅಧಿಕಾರಿ ಆಶಾಲತಾ ಕಾರ್ಯಕ್ರಮ ಸಂಘಟಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿ ಗೌರವ್ ನಿರೂಪಿಸಿದರು. ಎನ್.ಎಸ್.ಎಸ್ ವಿದ್ಯಾರ್ಥಿ ನಾಯಕಿ ರೂಪಾ ಕಮ್ರೇಕರ್ ಅತಿಥಿಗಳನ್ನು ಪರಿಚಯಿಸಿದರು.


ಎನ್.ಎಸ್.ಎಸ್ ವಿದ್ಯಾರ್ಥಿ ನಾಯಕ ಜೀತೇಶ್ ಅವರು ಏಕತಾ ಪ್ರತಿಜ್ಞೆ ನೆರವೇರಿಸಿದರು. ವಿದ್ಯಾರ್ಥಿ ಸುಜಲ್ ಅತಿಥಿಗಳನ್ನು ಸ್ವಾಗತಿಸಿದರು. ನಂದಿತಾ ಮತ್ತು ತಂಡದವರು ಎನ್.ಎಸ್.ಎಸ್ ಗೀತೆ ಹಾಡಿದರು. ಶ್ರೀಶರಣ್ಯ ವಂದನಾರ್ಪಣೆ ಮಾಡಿದರು.


ಕಾರ್ಯಕ್ರಮದಲ್ಲಿ ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top