ಹರಿಪ್ರಸಾದ್ ಗುಡಿಗಾರ್ ನಿಟ್ಟೆ ಯವರ ಸಾಹಿತ್ಯ ನಿರ್ದೇಶನದಲ್ಲಿ ಮೂಡಿಬಂದ "ನಮ್ಮೂರು ಕಾರ್ಕಳ" ಆಲ್ಬಮ್ ಸಾಂಗ್

Upayuktha
0

ಕಾರ್ಕಳ: "ನಮ್ಮೂರು ಕಾರ್ಕಳ" ಅನ್ನುವ ವಿಶೇಷ ಹಾಗೂ ವಿಭಿನ್ನತೆಯಿಂದ ಕೂಡಿದ ಆಲ್ಬಮ್ ಸಾಂಗ್ ನಲ್ಲಿ ಬಹುಮುಖ ಪ್ರತಿಭೆ ಯಾಗಿರುವ ಹರಿಪ್ರಸಾದ್ ಗುಡಿಗರ್ ರವರ ಕಥೆ ಸಾಹಿತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಕಾರ್ಕಾಳದ ಬಗೆಗೆ ಕುರಿತಾಗಿ 26ನೇ ತಾರೀಕು ಬುಧವಾರ ದೀಪಾವಳಿಯ ದಿನದಂದು ಬೆಳಗ್ಗೆ 11 ಗಂಟೆಗೆ ಕರ್ನಾಟಕದ ಪ್ರಖ್ಯಾತ ಯುಟ್ಯೂಬ್ ಚಾನೆಲ್ ಆದ "A2 ಮ್ಯೂಸಿಕ್ ಚಾನೆಲ್" ನಲ್ಲಿ ಬಿಡುಗಡೆಗೊಂಡಿದೆ.


ಶ್ರೀ ಎನ್.ವಿನಯ ಹೆಗ್ಡೆ( ಪ್ರೆಸಿಡೆಂಟ್, ಛೇರ್ಮನ್, ಚಾನ್ಸೆಲೋರ್ ಆಫ್ ನಿಟ್ಟೆ ಎಜುಕೇಶನ್ ಟ್ರಸ್ಟ್ ) ಅವರ ಆಶೀರ್ವಾದದೊಂದಿಗೆ ನಮ್ಮೂರು ಕಾರ್ಕಳ ಹಾಡಿನ ಮೊದಲ ಪೋಸ್ಟರ್ ಅನ್ನು ತಾ 3/07/22 ಬಿಡುಗಡೆಗೊಳಿಸಲಾಗಿದ್ದು, ಶ್ರೀ ವಿ ಸುನಿಲ್ ಕುಮಾರ್ (ಶಾಸಕರು ಕಾರ್ಕಳ ವಿಧಾನಸಭೆ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಕರ್ನಾಟಕ ಸರ್ಕಾರ ) ಅವರ ಅಮೃತ ಹಸ್ತದಿಂದ ತಾ 18/09/22 ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸ್ನೇಹ ಮಿಲನದ ಅದ್ದೂರಿ ಕಾರ್ಯಕ್ರಮದಲ್ಲಿ ಎಲ್ಲರ ಸಮ್ಮುಖದಲ್ಲಿ ನಮ್ಮೂರು ಕಾರ್ಕಳ ಆಲ್ಬಮ್ ಹಾಡನ್ನು ಮಾತ್ರ ಬಿಡುಗಡೆಗೊಳಿಸಲಾಗಿತ್ತು.


ಆದರೆ ಈ ಆಲ್ಬಮ್ ಸಾಂಗ್ ಇದೀಗ ಹರಿಪ್ರಸಾದ್ ಗುಡಿಗರ್ ರವರ ತನ್ನ ಹುಟ್ಟೂರು ಕಾರ್ಕಳದ ಬಗೆಗೆ ವಿಭಿನ್ನ ಕಲ್ಪನೆಯೊಂದಿಗೆ ಮತ್ತೆ ನಮ್ಮ ಕಣ್ಣ ಮುಂದೆ ಬರಲಿದೆ.



ಈ ಆಲ್ಬಮ್ ಸಾಂಗ್ ಇದರ ಪ್ರೊಡಕ್ಷನ್ ಹೆಡ್ ಆಗಿ ಶಿವಪ್ರಸಾದ್ ಗುಡಿಗಾರ್, ಪ್ರಮೋಷನ್ ಹೆಡ್ ವಿದ್ಯಾ ದುರ್ಗ ಪ್ರಸಾದ್ ಗುಡಿಗರ್, ಸಂಗೀತ ಕಂಠದಲ್ಲಿ ಸಮರ್ಥ ರಾವೋ, ಛಾಯಾಗ್ರಾಹಕರಾಗಿ ಸಂತೋಷ್ ಕುಮಾರ್ ಗುಂಪಾಲಾಜೆ, ಡ್ರೋನ್ ವರ್ಕ್ ಮಂತನ್ ಶೆಟ್ಟಿ, ನೃತ್ಯ ಸಂಯೋಜಕರಾಗಿ ಪ್ರಿಯಾಂಕ ಕುಂದೆರ್ (ಆರ್ಟ್ ಆಫ್ ಸೋಲೋ ಡಾನ್ ಸ್ಟುಡಿಯೋ ಕಾರ್ಕಳ) ಮುಖವರ್ಣನೆಯಲ್ಲಿ ಶ್ರವಣ್ ಕುಮಾರ್, ಎಡಿಟಿಂಗ್ ಮನೋಜ್ ಆನಂದ್ ಹೀಗೆ ಅನೇಕರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕೆಲಸ ಮಾಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top