ನಗುವಿನಿಂದ ಜೀವನೋತ್ಸಾಹ ಹೆಚ್ಚುತ್ತದೆ: ವೈ.ವಿ ಗುಂಡೂರಾವ್

Upayuktha
0

ಮಂಗಳೂರು: ದಿನನಿತ್ಯದ ಜೀವನದ ಜಂಜಾಟಗಳಿಂದ ಬೇಸತ್ತ ಮನುಷ್ಯನಿಗೆ ‘ನಗು’ ಸಂಜೀವಿನಿ ಇದ್ದಂತೆ. ಯಾಂತ್ರಿಕ ಬದುಕಿನಲ್ಲಿ ಮನುಷ್ಯನಿಗೆ ನಗು ಎನ್ನುವುದು ಮರುಭೂಮಿಯಲ್ಲಿನ ‘ಓಯಸಿಸ್’ ನಂತೆ. ನಗುವಿನ ಅಗತ್ಯ ಈಗಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಅತೀ ಅನಿವರ‍್ಯ. ಬರೀ ಕೆಲಸ ಮಾಡುವುದರಿಂದ ಜೀವನ ಬರಡಾಗುತ್ತದೆ. ದಿನವೊಂದರಲ್ಲಿ ಅರ್ಧ ಗಂಟೆ ಸ್ನೇಹಿತರ ಜೊತೆ, ಬಂಧುಗಳ ಜೊತೆ ಮನಬಿಚ್ಚಿ ಮಾತನಾಡಿ ನಗೆ ಚಟಾಕಿ ಹಾರಿಸಿದಲ್ಲಿ ಬದುಕು ಬಂಗಾರವಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಖ್ಯಾತ ಹಾಸ್ಯ ಸಾಹಿತಿ ಹಾಗೂ ಹರಟೆ ಖ್ಯಾತಿಯ ಶ್ರೀ ವೈ. ವಿ ಗುಂಡೂರಾವ್, ಬೆಂಗಳೂರು ಇವರು ಅಭಿಪ್ರಾಯ ಪಟ್ಟರು. ಬೀಚಿ ಅವರ ಸಾಹಿತ್ಯ ಇಂದಿಗೂ, ಅಂದಿಗೂ ಮತ್ತು ಎಂದೆAದಿಗೂ ಚಿರನೂತನವಾಗಿಯೇ ಇರುತ್ತದೆ. ಬೀಚಿಯವರ ಹಾಸ್ಯ ಸಾಹಿತ್ಯದಲ್ಲಿರುವ ಮತ್ತು ಯಾವತ್ತು ಇಳಿಯುವುದೇ ಇಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ಅವರ ಎಲ್ಲಾ ಹಾಸ್ಯ ವಿಡಂಬನೆಗಳು ಮತ್ತು ಹಾಸ್ಯ ಪ್ರಕಾರಗಳು ಅತ್ಯಂತ ವಾಸ್ತವಿಕವಾಗಿ, ಜನರ ಮನಗಳನ್ನು ಖಂಡಿತವಾಗಿಯೂ ತಟ್ಟುತ್ತದೆ.


ದಿನಾಂಕ 29-11-2022ನೇ ಮಂಗಳವಾರದಂದುದು ನಗರದ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜು ಇದರ ಶಂಕರಶ್ರೀ ಸಭಾಂಗಣದಲ್ಲಿ ಕಸಾಪ ಮಂಗಳೂರು ಘಟಕ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ಭಾರತೀ ಕಾಲೇಜು ನಂತೂರು, ಇದರ ಆಶ್ರಯದಲ್ಲಿ ನಡೆದ ‘ಸಿಡಿಲು-ನಗೆಹಬ್ಬ’ ಕಾರ‍್ಯ ಕ್ರಮದಲ್ಲಿ ಅವರು ಪ್ರೇಕ್ಷಕರನ್ನು ಉದ್ದೇಶಿಸಿ ರಂಜಿನಿ ಮಾತನಾಡಿದರು. ಅವರು ಬೀಛಿ ಮತ್ತು ಹಾಸ್ಯ ಎಂಬ ವಿಚಾರದ ಬಗ್ಗೆ ಮಾತನಾಡಿದರು.


ಇನ್ನೋರ್ವ ಅತಿಥಿ ಖ್ಯಾತ ಹಾಸ್ಯ ಸಾಹಿತಿ, ಅಂಕಣಕಾರ ಮತ್ತು ಹಾಸ್ಯ ಲೇಖಕ ಶ್ರೀ ಅಣಕು ರಾಮನಾಥ ಅವರು ‘ಹಿರಣ್ಯಯ್ಯ ಮತ್ತು ಹಾಸ್ಯ’ ಎಂಬ ವಿಚಾರದ ಬಗ್ಗೆ ಮಾತನಾಡಿದರು. ಪ್ರಸ್ತುತ ನಾವು ಈಗ ಬದುಕುತ್ತಿರುವ ಬದುಕು ಒಂದು ರೀತಿಯ ಏಕತನತೆಯನ್ನು ಉಂಟುಮಾಡಿದೆ. ಮುಖವಾಡದ ಬದುಕಿನಲ್ಲಿ ಹೆಚ್ಚಿನವರು ಬದುಕುತ್ತಿದ್ದಾರೆ. ಇತರರನ್ನು ಮೆಚ್ಚಿಸುವಲ್ಲಿಯೇ ತಮ್ಮ ಜೀವನದ ಸುಂದರ ಕ್ಷಣಗಳನ್ನು ವ್ಯರ್ಥ ಮಾಡಬಾರದು. ನಾವು ಇತರರಿಗಾಗಿ ಬದುಕುವುದರ ಜೊತೆಗೆ ನಮಗಾಗಿಯೇ ಬದುಕಬೇಕಾಗಿದೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ಮಗದೊಮ್ಮೆ ಆತ್ಮಾವಲೋಕನ ಮಾಡಬೇಕು, ಸಿಂಹಾವಲೋಕನ ಮಾಡಬೇಕು. ಹಿರಣ್ಯಯ್ಯ ನವರು ತಮ್ಮ ಹಾಸ್ಯದ ಚಟಾಕಿಗಳಿಂದಲೇ ಸಮಾಜದ ಓರೆಕೋರೆಗಳನ್ನು ವಿಡಂಬನಾತ್ಮಕವಾಗಿ ವಿಮರ್ಷಿಸುವ ಕೆಲಸವನ್ನು ಮಾಡಿದ್ದಾರೆ. ಈಗ ಅಂತಹಾ ಹಿರಣ್ಯಯ್ಯನವರ ಅಗತ್ಯ ನಮ್ಮ ಸಮಾಜಕ್ಕೆ ಅಗತ್ಯವಾಗಿದೆ ಎಂದು ಶ್ರೀ ರಾಮನಾಥ್ ಅವರು ಅಭಿಪ್ರಾಯಪಟ್ಟರು.


ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ, ಮಂಗಳೂರು ತಾಲೂಕು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ್ ರೆವಣಕರ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹವ್ಯಕ ಸಭಾ ಮಂಗಳೂರು ಇದರ ಅಧ್ಯಕ್ಷರಾದ ಡಾ|| ರಾಜೇಂದ್ರ ಪ್ರಸಾದ್ ಅವರು ಭಾಗವಹಿಸಿ ಶುಭ ಹಾರೈಸಿದರು. ಶ್ರೀ ಗಣೇಶ್ ಪ್ರಸಾದ್‌ಜೀ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಗೌರವ ಕಾರ್ಯದರ್ಶಿಗಳಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಹವ್ಯಕ ಮಂಡಲದ ಅಧ್ಯಕ್ಷರಾದ ಶ್ರೀ ಗಣೇಶ್ ಮೋಹನ್ ಕಾಶಿಮಠ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಶ್ರೀ ಗಣೇಶ್ ಸುಂದರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ರತ್ನಾವತಿ ಜಿ ಬೈಕಾಡಿ ಅವರು ಪ್ರಾರ್ಥನೆ ಮಾಡಿದರು. ಕೋಶಾಧಿಕಾರಿ ಶ್ರೀ ಸುಬ್ರಾಯ ಭಟ್ ಅವರು ವಂದಿಸಿದರು. ಸುಮಾರು 150 ಮಂದಿ ಈ ಸಿಡಿಲು ನಗೆಹಬ್ಬದಲ್ಲಿ ಭಾಗವಹಿಸಿ ಹೊಟ್ಟೆ ಹುಣ್ಣಾಗುವಂತೆ ನಕ್ಕು ಸಂಭ್ರಮಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top