ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆಯ ವಾರ್ಷಿಕೋತ್ಸವ

Upayuktha
0

ಕಾಸರಗೋಡು: ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆಯ ವಾರ್ಷಿಕೋತ್ಸವ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜರಗಿತು. ಶ್ರೀ ಕ್ಷೇತ್ರದ ಪ್ರಬಂಧಕ ಸೀತಾರಾಮ ಬಳ್ಳುಳ್ಳಾಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ " ಸಂಗೀತವು ನಮ್ಮ ಸಂಸ್ಕೃತಿಯಾಗಿದೆ. ಸಂಗೀತದ ನಿರಂತರ ಆಸ್ವಾದನೆಯು ಪ್ರತಿಯೊಂದು ಜೀವಿಯ ಆರೋಗ್ಯಕ್ಕೆ ಪೂರಕವಾಗಿದೆ. ಸಂಗೀತದ ಮೂಲಕ ದೇವರ ನಾಮಸ್ಮರಣೆ ನಿರಂತರ ನಡೆಯುತ್ತಿರಲಿ "ಎಂದು ಶುಭಕೋರಿದರು.

ನಂತರ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸುಮಧುರವಾದ ಸಂಗೀತ ಉಪಾಸನೆ ಜರಗಿತು. ವಾರ್ಷಿಕೋತ್ಸವದ ಅಂಗವಾಗಿ ಸಂಗೀತ ಗುರುಗಳಾದ ವಿದುಷಿ ಉಷಾಈಶ್ವರ ಭಟ್ ಅವರು ಸಂಗೀತ ಕಚೇರಿ ನಡೆಸಿಕೊಟ್ಟರು. ಪಿಟೀಲಿನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು, ಮೃದಂಗದಲ್ಲಿ ವಿದ್ವಾನ್ ಅನಿಲಕ್ಕಾಡ್ ಡಾ ಆರ್ ಜಯಕೃಷ್ಣನ್, ಘಟಂ ನಲ್ಲಿ ವಿದ್ವಾನ್ ಬಿ.ಜಿ. ಈಶ್ವರ ಭಟ್ ಜೊತೆಗೂಡಿದರು.

ಕಾರ್ಯಕ್ರಮದ ಕೊನೆಗೆ ಸಂಗೀತ ಕಲಾವಿದರನ್ನು ಶ್ರೀ ಕ್ಷೇತ್ರ ಪ್ರಧಾನ ಅರ್ಚಕ ಅನಂತಪದ್ಮನಾಭ ಮಯ್ಯ ಗೌರವಿಸಿದರು. ಗೋವಿಂದ ಬಳ್ಳಮೂಲೆ ಸ್ವಾಗತಿಸಿ, ರಾಘವನ್ ಬೆಳ್ಳಿಪ್ಪಾಡಿ ಧನ್ಯವಾದವಿತ್ತರು. ಶಾಸ್ತಾ ಕುಮಾರ ನಿರೂಪಣೆ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top