ಕ.ಸಾ.ಪ. ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್‌ರಿಂದ ಬಿಡುಗಡೆ
ಪುತ್ತೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ದ.ಕ.ಜಿಲ್ಲಾ ಜೇನು ವ್ಯವಸಾಯ ಸಹಕಾರಿ ಸಂಘ ಮಿತ ಪುತ್ತೂರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದ.ಕ.ಜಿಲ್ಲಾ ಘಟಕ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ದ.ಕ.ಜಿಲ್ಲೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ತಾಲೂಕು ಘಟಕ ಸಹಭಾಗಿತ್ವದಲ್ಲಿ ಅಂತಾರಾಜ್ಯ ಮಟ್ಟದ "ಮಧು" ಕವಿಗೋಷ್ಠಿ ಜೇನು ಸೊಸೈಟಿಯ ಮಾಧುರಿಸೌಧ ಸಭಾಂಗಣ ಪುತ್ತೂರಿನಲ್ಲಿ ಭಾನುವಾರ (ನ.27) ನಡೆಯಿತು.
ಈ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ವತಿಯಿಂದ ಜಿಲ್ಲಾಘಟಕ ದಕ್ಷಿಣ ಕನ್ನಡ ಪ್ರಾಯೋಜಕತ್ವದಲ್ಲಿ ಅಂರ್ಜಾಲ ಆಧಾರಿತ ಅಂತಾರಾಷ್ಟ್ರೀಯ ಮಟ್ಟದ ಮುಕ್ತಕಗಳ ರಚನೆಯ ಸ್ಪರ್ಧೆ ಯಲ್ಲಿ ವಿಜೇತರಾದವರ, ಹಾಗೂ ಭಾಗವಹಿಸಿದವರ ಮುಕ್ತಕಗಳನ್ನೊಳಗೊಂಡ "ಮುಕ್ತಕ ಪುಷ್ಪ "ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ದ ಅಧ್ಯಕ್ಷ ರಾದ ಪುತ್ತೂರು ಉಮೇಶ್ ನಾಯಕ್ ಬಿಡುಗಡೆ ಮಾಡುವುದರ ಮೂಲಕ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ಪ್ರೊ.ವಿ.ಬಿ.ಅರ್ತಿಕಜೆ, ದ.ಕ.ಜಿಲ್ಲಾ ಜೇನುವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರಕೋಲ್ಚಾರ್, ಹರಿಪ್ರಸಾದ್ ಎಮ್ ಶಿಕ್ಷಣ ಸಂಯೋಜಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಶ್ರೀ ಸಮುದ್ರವಳ್ಳಿವಾಸು ಮಕ್ಕಳ ಸಾಹಿತಿಗಳು ಹಾಗೂ ಸಂಘಟನಾ ಕಾರ್ಯದರ್ಶಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ಜಯಾನಂದ ಪೆರಾಜೆ ಸಂಪಾದಕರು "ಮಧು ಪ್ರಪಂಚ"ಮಾಧುರಿ ಸೌಧ ಪುತ್ತೂರು, ಡಾ.ಸುರೇಶ ನೆಗಳಗುಳಿ ಅಧ್ಯಕ್ಷ ರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ, ರೇಮಂಡ್ ಡಿಕೂನ ತಾಕೋಡೆ ಪಿಂಗಾರ ಸಾಹಿತ್ಯ ಬಳಗ ಸಂಚಾಲಕರು, ಹಿರಿಯ ಪತ್ರಕರ್ತರು, ಶಾಂತಾ ಪುತ್ತೂರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷ ರು,ಮುಕ್ತಕ ಪುಷ್ಪ ಕೃತಿಯ ಮುಖಪುಟ ವಿನ್ಯಾಸ ಮಾಡಿದ ಕವಿ ಗೋಪಾಲಕೃಷ್ಣ ಶಾಸ್ತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಪೂರ್ವ ಕಾರಂತ್ ನಿರೂಪಿಸಿದ ಈ ಕಾರ್ಯಕ್ರಮ ದಲ್ಲಿ ದಿಶಾ ಸಿ ಜಿ ಪ್ರಾರ್ಥಿಸಿದರು. ಶಾಂತಾ ಪುತ್ತೂರು ಸ್ವಾಗತಿಸಿ ದ.ಕ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಜಿ.ಪಿ. ಶ್ಯಾಮಭಟ್ ಧನ್ಯವಾದವಿತ್ತರು.
ನಂತರ ಮಧುಪ್ರಪಂಚ ಪತ್ರಿಕೆಯ ಸಂಪಾದಕ ಜಯಾನಂದ ಪೆರಾಜೆಯವರ ಅಧ್ಯಕ್ಷ ತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸಮುದ್ರವಳ್ಳಿವಾಸು, ಮಕ್ಕಳ ಸಾಹಿತಿ,ಸಂಘಟನಾ ಕಾರ್ಯದರ್ಶಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ಡಾ.ಸುರೇಶ್ ನೆಗಳಗುಳಿ, ಅಧ್ಯಕ್ಷ ರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ, ರೇಮಂಡ್ ಡಿಕೂನ ತಾಕೋಡೆ ಪಿಂಗಾರ ಸಾಹಿತ್ಯ ಬಳಗ ಸಂಚಾಲಕರು, ಶಾಂತಾ ಪುತ್ತೂರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷರು, ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸತೀಶ್ ಬಿಳಿಯೂರು, ಪ್ರಮೀಳಾ ರಾಜ್ ಸುಳ್ಯ, ಜೀವಪರಿ, ನಾರಾಯಣ ನಾಯ್ಕ ಕುದುಕೋಳಿ, ಮಲ್ಲೇಶ.ಜಿ.ಹಾಸನ, ಗುರುರಾಜ್ ಎಂ.ಆರ್.ಕಾಸರಗೋಡು, ಧನ್ವಿ ಜೆ ರೈ, ಹೇಮಂತ್ ಕುಮಾರ್.ಡಿ, ಶ್ರೀಕಲಾ ಬಿ.ಕಾರಂತ್ ಅಳಿಕೆ, ಶಶಿಕಲಾ ಬಿ, ಶ್ರೀಮತಿ ಸೋನಿತಾ.ಕೆ.ನೇರಳಕಟ್ಟೆ, ಹಿತೇಶ್ ಕುಮಾರ್.ಎ., ಜೆಸ್ಸಿ.ಪಿ.ವಿ., ರೇಖಾಸುದೇಶ್ ರಾವ್, ಅಬ್ದುಲ್ ಸಮದ್ ಬಾವಾ ಪುತ್ತೂರು, ಭಾಸ್ಕರ್ ಎ. ವರ್ಕಾಡಿ, ಮಲ್ಲಿಕಾ ಜೆ ರೈ ಪುತ್ತೂರು, ಅಮಿರ್ ಬನ್ನೂರು ಪುತ್ತೂರು, ಡಾ.ವಾಣಿಶ್ರೀ ಕಾಸರಗೋಡು, ಸುಪ್ರೀತಾ ಚರಣ್ ಪಾಲಪ್ಪೆ, ಸೌಮ್ಯಾ ಗೋಪಾಲ್, ಬಿ.ಚಂದ್ರಗೌಡ, ಎಂ.ಎ. ಮುಸ್ತಾಫಾ ಬೆಳ್ಳಾರೆ, ಅಡ್ಕಸ್ಥಳ ಆನಂದ ರೈ, ಶ್ರೇಯಾ ಸಿ.ಪಿ.ಕಡಬ, ರಾಧಾಕೃಷ್ಣ ಎರುಂಬು, ಪರಮೇಶ್ವರಿ ಪ್ರಸಾದ್, ಮೈತ್ರಿ ಭಟ್, ಗೋಪಾಲಕೃಷ್ಣ ಶಾಸ್ತ್ರಿ, ಶಶಿಧರ ಏಮಾಜೆ, ಪರಿಮಳ ಐವರ್ನಾಡು, ಹರಿಣಾಕ್ಷಿ ಉಮೇಶ್ ನೇರಳಕಟ್ಟೆ, ಸವಿತಾ ಪಿ.ಪಟ್ಟೆ, ಸೌಜನ್ಯ ಬಿ.ಎಂ, ಅಪೂರ್ವ ಚೇತನ್, ಅಪೂರ್ವ ಕಾರಂತ್, ಓಬಳೇಶ ಬಿ.ಆರ್.ಪಿ. ಪುತ್ತೂರು, ಸುಜಿತ್ ಕುಮಾರ್ ಸುಭಾಷ್ ನಗರ, ಗೋಪಾಲಕೃಷ್ಣ ಭಟ್ ಕಟ್ಟತ್ತಿಲ, ಜನಾರ್ದನ ದುರ್ಗ, ನಯನ, ನಾರಾಯಣ ರೈ ಕುಕ್ಕುವಳ್ಳಿ, ಶಾಂತಾ ಪುತ್ತೂರು, ರೇಮಂಡ್ ಡಿಕೂನ ತಾಕೋಡೆ, ಡಾ.ಸುರೇಶ್ ನೆಗಳಗುಳಿ, ಸಮುದ್ರವಳ್ಳಿ ವಾಸು ಸ್ವರಚಿತ ಕವನ ವಾಚಿಸಿದರು.
ರೇಖಾ ಸುದೇಶ್ ರಾವ್ ಸ್ವಾಗತಿಸಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಕಾರ್ಯದರ್ಶಿ ಅಡ್ಕಸ್ಥಳ ಆನಂದ ರೈ ಧನ್ಯವಾದವಿತ್ತರು. ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ