
ಮಂಗಳೂರು: ಬದಿಯಡ್ಕ ಖ್ಯಾತ ಹಿರಿಯ ದಂತ ವೈದ್ಯ ಡಾ. ಕೃಷ್ಣಮೂರ್ತಿಯವರ ಅನುಮಾನಾಸ್ಪದ ಸಾವಿನ ಸಮಗ್ರ ತನಿಖೆಗೆ ಒತ್ತಾಯಿಸಿ ಇಂದು (ನ.18) ಶುಕ್ರವಾರದಂದು ಸಂಜೆ 6 ಗಂಟೆಗೆ ಮಂಗಳೂರಿನ ಸರ್ಕ್ಯೂಟ್ ಹೌಸ್ ನ ಮುಂಭಾಗ ಮೌನ ಪ್ರತಿಭಟನೆ ಮತ್ತು ಹಣತೆ ಬೆಳಗಿ ಪ್ರತಿಭಟನೆ ಮಂಗಳೂರು ಹವ್ಯಕ ಸಭಾ (ರಿ), ದಕ್ಷಿಣ ಕನ್ನಡ, ಕಾಸರಗೋಡು ಹವ್ಯಕ ಮಹಾಸಭಾ ಮತ್ತು ಮಂಗಳೂರು ಹವ್ಯಕ ಮಂಡಲ ಇದರ ಜಂಟಿ ಆಶ್ರಯದಲ್ಲಿ ಜರುಗಲಿದೆ. ಹವ್ಯಕ ಸಭಾ ಇದರ ಸುಮಾರು 250 ಮಂದಿ ಸದಸ್ಯರು ಈ ಮೌನ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಇದೊಂದು ಶಾಂತಿಯುತ ಪ್ರತಿಭಟನೆಯಾಗಿದ್ದು, ಈ ಸಾವಿನ ರಹಸ್ಯದ ಹಿಂದೆ ಇರುವ ಹುನ್ನಾರವನ್ನು ಬಯಲಿಗೆ ತರಲು ಮತ್ತು ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಲು ಹಕ್ಕೊತ್ತಾಯ ಮಂಡಿಸಲು ಈ ಮೌನ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಹವ್ಯಕ ಸಭಾ ಮಂಗಳೂರು ಇದರ ಅಧ್ಯಕ್ಷರಾದ ಡಾ|| ರಾಜೇಂದ್ರ ಪ್ರಸಾದ್,ಹವ್ಯಕ ಮಂಡಲದ ಅಧ್ಯಕ್ಷರಾದ ಶ್ರೀ ಗಣೇಶ ಮೋಹನ್ ಕಾಶಿ ಮಠ, ದ ಕ ಹಾಗೂ ಕಾಸರಗೋಡು ಹವ್ಯಕ ಮಹಾಸಭಾ ಇದರ ಅಧ್ಯಕ್ಷರಾದ ಶ್ರೀ ನಿಡುಗಳ ಕ್ರಷ್ಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ