ಬೆಂಗಳೂರು: ನಗರದ ಕೆಂಗೇರಿ ಉಪನಗರದ ರಾಯರ ಮಠದಲ್ಲಿ ವಿಶ್ವ ಮಧ್ವ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮಧ್ವಜಯಂತಿ ಅಂಗವಾಗಿ ಹಿರಿಯ ದಾಸ ಸಾಹಿತ್ಯ ಸಂಶೋಧಕಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ರವರಿಗೆ 'ಮಧ್ವವಿಜಯ ಪ್ರಶಸ್ತಿ'ಮತ್ತು ಹರಿದಾಸ ಸಂಶೋಧಕ - ಡಾ. ಆರ್.ವಾದಿರಾಜು , ಡಾ. ಮಧುಸೂದನ್ ಮತ್ತು ಡಾ.ರಮಾ ಕಲ್ಲೂರ್ಕರ್ ರವರುಗಳಿಗೆ 'ಗುರು ಸೇವಾ ಧುರೀಣ' ಪ್ರಶಸ್ತಿಯನ್ನು ತಂಬಿಹಳ್ಳಿ ಶ್ರೀ ಮಾಧವತೀರ್ಥ ಮಠದ ಕಿರಿಯ ಪೀಠಾಧೀಶರಾದ ಶ್ರೀವಿದ್ಯಾವಲ್ಲಭ ಮಾಧವ ತೀರ್ಥ ಶ್ರೀಪಾದರು ನೀಡಿ ಆರ್ಶಿವದಿಸಿದರು.
ವಿಎಂಡಬ್ಲುಎ ಸಂಸ್ಥಾಪಕ ವೆಂಕೋಬರಾವ್, ಕೆಂಗೇರಿ ರಾಘವೇಂದ್ರ ಮಠದ ಅಧ್ಯಕ್ಷ ಡಾ. ಎಚ್.ಎಸ್.ಸುಧೀಂದ್ರ ಕುಮಾರ್, ಕಾರ್ಯದರ್ಶಿ ವಿಜಯೀಂದ್ರ, ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸಂಚಾಲಕರಾದ ಡಾ. ಎಸ್.ಆರ್. ರಾಘವೇಂದ್ರ ಮತ್ತು ಡಾ. ವಾಣಿಶ್ರೀ ಗಿರೀಶ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ