ಕಾಸರಗೋಡು: ಕಾಸರಗೋಡು ಜಿಲ್ಲೆಯ ನೀರ್ಚಾಲು ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವವು ಮಂಗಳವಾರ (ನ.29) ಹಲವು ಧಾರ್ಮಿಕ ವಿಧಿ ವಿಧಾನ ಸಹಿತ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗಿನಿಂದ ರಾತ್ರಿ ತನಕ ದೇವಳದ ಪ್ರಾಂಗಣದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿಶೇಷವಾಗಿ ಬೆಳಿಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 12.30 ಘಂಟೆಯ ತನಕ ಡಾ.ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ವೈಭವಪೂರಿತವಾಗಿ ಜರುಗಿತು.
ಡಾ.ವಾಣಿಶ್ರೀ ಕಾಸರಗೋಡು ಇವರು ಕಾರ್ಯಕ್ರಮದ ಸಂಪೂರ್ಣ ನಿರೂಪಣೆ ಮಾಡಿದರು. ಗುರುರಾಜ್ ಕಾಸರಗೋಡು, ಡಾ. ವಾಣಿಶ್ರೀ ಕಾಸರಗೋಡು, ಸನುಷ ಸುನಿಲ್, ಅಹನಾ ಎಸ್ ರಾವ್, ಭಾಸ್ಕರ್ ಅಡೂರ್, ಲೇಖನ್ ಗೌಡ, ಖುಷಿ, ರೋಹನ್, ಕ್ರಿತ್ವಿಕ್, ಅಯನ್, ಸನುಷಾ ಸುಧಾಕರನ್, ಹರೀಶ್ ಪಂಜಿಕಲ್ಲು, ವಿಜಿತಾ ಕೇಶವನ್, ನಿಹಾರಿಕ ಕಾಟುಕುಕ್ಕೆ, ವಿಷ್ಣು ಸುಧಾಕರನ್, ಕೃಪೇಶ್, ಉಷಾ ಸುಧಾಕರನ್, ಪೂಜಾ ಶ್ರೀ, ಕೀರ್ತಿ, ಧನ್ವಿತ್ ಕೃಷ್ಣ, ಪ್ರಥಮ್ಯ ಯು ವೈ ಮುಂತಾದ ಕಲಾವಿದರು ಭಾಗವಹಿಸಿದರು. ದೇವಳದ ವತಿಯಿಂದ ಆಡಳಿತ ವರ್ಗದವರು ಹಾಗೂ ಸೇವಾ ಸಮಿತಿಯ ಸರ್ವ ಸದಸ್ಯರು ದೇವರ ಪ್ರಸಾದ ನೀಡಿ ಗೌರವಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ