ಗೃಹರಕ್ಷಕ ಕಛೇರಿಯಲ್ಲಿ ಕನಕ ಜಯಂತಿ ಆಚರಣೆ

Upayuktha
0

ಮಂಗಳೂರು: ದಿನಾಂಕ 11-11-2022 ನೇ ಶುಕ್ರವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಕನಕ ಜಯಂತಿ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರು ಹಾಗೂ ಪೌರರಕ್ಷಣಾ ಪಡೆ ದ.ಕ ಜಿಲ್ಲೆ ಇದರ ಮುಖ್ಯ ಪಾಲಕರಾದ ಡಾ ಮುರಲೀ ಮೋಹನ್ ಚೂಂತಾರು ಅವರು ಕನಕ ದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುದರ ಮೂಲಕ ಕನಕ ಜಯಂತಿ ಆಚರಣೆಗೆ ಚಾಲನೆ ನೀಡಿದರು.


ಕುಲಕುಲವೆಂದು ಹೊಡೆದಾಡುವ ಜನರಿಗೆ ತಮ್ಮ ಪ್ರಕಾರ ವೈಚಾರಿಕತೆ ಚಿಂತನೆಯಿಂದ ಎಚ್ಚರಿಸಿ, ಜಾತಿ ವ್ಯವಸ್ಥೆಯ ವಿರುದ್ದ ಕನಕ ದಾಸರು ಏಕಾಂಗಿಯಾಗಿ ಹೋರಾಡಿದರು ಮತ್ತು ಮನಷ್ಯ ಕುಲಕಿಂತ ಶೇಷ್ಠ ಕುಲ ಇನ್ನೊಂದಿಲ್ಲ ಎಂದು ಪ್ರತಿಪಾದಿಸಿದ ಕನಕ ದಾಸರು ಎಲ್ಲಾ ಕಾಲದಲ್ಲೂ ಸಲ್ಲುವ ಮಹನ್ ಚೇತನ ಎಂದು ಡಾ ಚೂಂತಾರು ಅಭಿಪ್ರಾಯಪಟ್ಟರು.


ಈ ಸಮಯದಲ್ಲಿ ಕಛೇರಿ ಅಧೀಕ್ಷಕರಾದ ಶ್ರೀ ರತ್ನಾಕರ, ಹಿರಿಯ ಗೃಹರಕ್ಷಕರಾದ ಸುನೀಲ್, ದೀವಕರ್, ರಮೇಶ್ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top