ವಿವೇಕಾನಂದ ವಸತಿ ನಿಲಯದ ನವೀಕೃತ ಪಾಕಶಾಲೆ ಉದ್ಘಾಟನೆ

Upayuktha
0

ಪುತ್ತೂರು: ವಿವೇಕಾನಂದ ವಿದ್ಯಾಸಂಸ್ಥೆ ಒಬ್ಬ ವ್ಯಕ್ತಿಯ ಸ್ವತ್ತಲ್ಲ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸಮಾಜದ ಹಲವರ ಸಹಕಾರದಿಂದ ನಡೆಯುತ್ತಿರುವಂತಹ ಸಂಸ್ಥೆ. ಇಲ್ಲಿ ವಿದ್ಯಾಭ್ಯಾಸಕ್ಕಾಗಿ ಹಲವು ಕಡೆಯಿಂದ ಬಂದು ವಸತಿ ನಿಲಯಗಳಲ್ಲಿ ಆಶ್ರಯ ಪಡೆಯುವ ಮಕ್ಕಳಿಗೆ ಇದು ನಮ್ಮ ಮನೆಯೆಂಬ ಭಾವನೆ ಬರಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.


ವಿವೇಕಾನಂದ ವಸತಿ ನಿಲಯದ ನವೀಕೃತ ಪಾಕಶಾಲೆಯನ್ನು ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು.


ವಸತಿ ನಿಲಯಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸಗಳೂ ಮಹತ್ವವಾದದ್ದೇ ಆಗಿವೆ. ಎಲ್ಲಾ ವ್ಯವಸ್ಥೆ ಸರಿಯಾಗಿ ಆದಾಗ ಮಾತ್ರ ಮಕ್ಕಳಿಗೆ ಮತ್ತು ಪೋಷಕರಿಗೆ ಸಂಸ್ಥೆಯ ಬಗ್ಗೆ ಗೌರವ ಮೂಡುತ್ತದೆ. ಅಂತಹ ಸಾತ್ವಿಕ ವಾತಾವರಣವನ್ನು ನಿರ್ಮಿಸಿ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದಕ್ಕಾಗಿ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಪರಿಚಾರಕಿಯರಿಗೆ ಮತ್ತು ಬಾಣಸಿಗರಿಗೆ ವಸ್ತ್ರವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಖಜಾಂಚಿ ಅಚ್ಯುತ್ ನಾಯಕ್, ವಿವೇಕಾನಂದ ವಸತಿ ನಿಲಯದ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ವಸತಿನಿಲಯಗಳ ನಿಲಯ ಪಾಲಕರು ಉಪಸ್ಥಿತರಿದ್ದರು.


ವಿವೇಕಾನಂದ ವಸತಿ ನಿಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಶಿವಕುಮಾರ್ ಪ್ರಸ್ಥಾವನೆಗೈದರು. ವಿದ್ಯಾರ್ಥಿನಿ ಅಕ್ಷತಾ ವೈಯಕ್ತಿಕ ಗೀತೆ ಹಾಡಿದರು. ಮುಖ್ಯ ವಸತಿನಿಲಯ ಪಾಲಕ ಚೇತನ್ ಸ್ವಾಗತಿಸಿ, ನಿಲಯ ಪಾಲಕಿ ಗೀತಾಶ್ರೀ ವಂದಿಸಿದರು. ನಿಲಯ ಪಾಲಕಿ ವರ್ಷ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top