‘ಬದುಕಿನ ಮೂಲ ಉದ್ದೇಶ ಆನಂದ’- ಬಲ್ಲವರ ಮಾತು. ಅದನ್ನು ಪಡೆಯಲು ನಾನಾ ಮಾರ್ಗಗಳು, ನಾನಾ ವೃತ್ತಿಗಳು. ಕೃಷಿ, ಬರವಣಿಗೆ, ಪ್ರವಾಸ, ಓದು ಹೀಗೆ. ನನಗೆ ಅಡುಗೆ! ವಿಧವಿಧದ ಪಾಕೇತನಗಳನ್ನು ಮಾಡುವುದೆಂದರೆ ಎಲ್ಲಿಲ್ಲದ ಖುಷಿ.
ಇದಕ್ಕೆ ಅನುಕೂಲವಾಗಿ ಒದಗಿ ಬಂದದ್ದು ಹಲಸು. ಅಡುಗೆಗೆ ಸಮೃದ್ಧ ಸಾಮಗ್ರಿ ಒದಗಿಸುವ ಹಲಸಿನ ರೂಪ- ಬೀಜ, ಎಳೆಹಲಸು, ಕಾಯಿತೊಳೆ, ಹಣ್ಣು ಮತ್ತು ಪ್ರತಿಯೊಂದರಿಂದಲು ಮಾಡಲು ಸಾಧ್ಯವಾಗುವ ರಸರುಚಿಗಳು! ಓಹ್, ಅದು ಬೇರೆಯದೇ ಲೋಕ.
ಸೃಜನಶೀಲತೆಗೆ ಇಂಬುಕೊಡುವ ಭಾರತೀಯ ಅಡುಗೆಯ ಸಿದ್ಧಾಂತದ ಹಿನ್ನೆಲೆಯಲ್ಲಿ ಇರುವ ಸಾಮಗ್ರಿ ಮತ್ತು ಸಾಧ್ಯತೆಗಳ ಮೂಲಕ ಅಸಂಖ್ಯ ಸಂಯೋಜನೆಗಳನ್ನು ತಯಾರಿಸಬಹುದು. ಆದರೆ ಎಲ್ಲರಿಗೂ ಒಪ್ಪಿತವಾಗಬಹುದಾದ ಸಂಯೋಜನೆಗಳ ಆಯ್ಕೆಗೆ ಒಂದಿಷ್ಟು ಆಲೋಚನೆ, ಅನುಭವ ಹಾಗೂ ಸ್ಫುರಣೆ ಬೇಕಾಗುತ್ತದೆ. ನನ್ನ ಮಿತಿಯಲ್ಲಿ ಹಲಸನ್ನು ಬಳಸಿ ಮಾಡಿದ ನೂರೊಂದು ಪಾಕ ಸಂಯೋಜನೆಗಳಿಲ್ಲಿವೆ.
ಗಮನ ಸೆಳೆಯುವ ವಿನ್ಯಾಸದೊಂದಿಗೆ ಸುಲಭ ಸಂವಹನದ ದಾರಿಯಾಗಿ ಇ-ಬುಕ್ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕನ್ನಡ ಭಾಷೆಯಲ್ಲಿ ಬಹುಶ: ಈ ಪ್ರಯತ್ನ ಹೊಸತು ಹಾಗೂ ರಾಜ್ಯೋತ್ಸವ ಮಾಸದ ಸಂಭ್ರಮದಲ್ಲಿ ಅತ್ಯಂತ ಅರ್ಥಪೂರ್ಣ ಎಂದುಕೊಂಡಿದ್ದೇವೆ.
ಮನೆಮನೆಗಳಲ್ಲಿ ಹಲಸಿನ ಬಳಕೆ ಹೆಚ್ಚಾಗಲಿ ಎಂಬ ಉದ್ದೇಶದಿಂದ ಇ-ಬುಕ್ಕನ್ನು ಉಚಿತವಾಗಿ ನೀಡುತ್ತಿದ್ದಾರೆ. ಓದಿ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಇ-ಬುಕ್ ಲಿಂಕ್: (www.ngvnatural.com/jackebook) ಪುಸ್ತಕದ ವಿನ್ಯಾಸ ಹಾಗೂ ಪ್ರಕಟಣೆ ಜಿ.ಬಿ ನವೀನ್. ಇವರು ಎನ್‌ಜಿವಿ ನ್ಯಾಚುರಲ್ ಇಂಡಸ್ಟ್ರೀಸ್ ಪ್ರೈ. ಲಿ. ಎಂಬ ಸ್ಟಾರ್ಟಪ್ ಉದ್ಯಮದ ಸಂಸ್ಥಾಪಕರು.
- ಸೌಖ್ಯ ಮೋಹನ್ ತಲಕಾಲುಕೊಪ್ಪ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


