ಬೆಂಗಳೂರು: ಬೆಂಗಳೂರಿನ ಮೈತ್ರೀ ಸಂಸ್ಕೃತ ಸಂಸ್ಕೃತಿ ಪ್ರತಷ್ಠಾನಮ್- ಸಂಸ್ಕೃತ ಗುರುಕುಲಮ್ ವತಿಯಿಂದ ಗೀತಾಜಯಂತೀ ಪ್ರಯುಕ್ತ ಡಿಸೆಂಬರ್ 18ರಂದು ಭಾನುವಾರ ಸಹಸ್ರಕಂಠ ಭಗವದ್ಗೀತಾ ಪಾರಾಯಣಮ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಸಕ್ತ ಬಂಧುಗಳು ಆನ್‌ಲೈನ್ ಮತ್ತು ಆಫ್‌ಲೈನ್ ಪಾರಾಯಣಗಳಲ್ಲಿ ಭಾಗವಹಿಸಲು ಅವಕಾಶವಿದೆ.
ಪಾರಾಯಣದ ಪ್ರಶಿಕ್ಷಣವು ಆನ್‌ಲೈನ್ ಮೂಲಕ ನವೆಂಬರ್ 14ರಂದು ಸೋಮವಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ. ನಿತ್ಯವೂ ಪಾರಾಯಣ ಪ್ರಶಿಕ್ಷಣದಲ್ಲಿ ಭಾಗವಹಿಸಲು ಪ್ರತಿಷ್ಠಾವದ ಸಂಯೋಜಕರಲ್ಲಿ ಒಬ್ಬರಾದ ಕು| ಧನ್ಯಶ್ರೀ ಅವರ ಮೊಬೈಲ್ ಸಂಖ್ಯೆಗೆ (7483586269) ವಾಟ್ಸಾಪ್ ಮೂಲಕ ಹೆಸರನ್ನು ಕಳುಹಿಸಿ ನೋಂದಾಯಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಕರೆ ಮಾಡಲು ಅವಕಾಶವಿಲ್ಲ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


