ಕುದ್ರೆಪ್ಪಾಡಿ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶ ಅಭಿನಂದನಾ ಸಭೆ, ಗೌರವಾಭಿನಂದನೆ

Chandrashekhara Kulamarva
0

ಸೀತಾಂಗೋಳಿ: ಕುದ್ರೆಪ್ಪಾಡಿ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ ಮಾಸದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಅತ್ಯಂತ ವೈಭವಯುತವಾಗಿ ಜರಗಿದ್ದು ಇದರ ಯಶಸ್ವಿಗಾಗಿ ಶ್ರಮಿಸಿದವರನ್ನು ಅಭಿನಂದಿಸುವ ಕಾರ್ಯಕ್ರಮ ಷಷ್ಠಿ ಮಹೋತ್ಸವದಂದು ಕ್ಷೇತ್ರದ ಸ್ಕಂದ ಸಭಾ ಭವನದಲ್ಲಿ ಜರಗಿತು.


ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧಾರ್ಮಿಕ-ಶೈಕ್ಷಣಿಕ, ಸಾಂಸ್ಕೃತಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಪವಿತ್ರಪಾಣಿ, ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ಪೆಜತ್ತಾಯ ಕಾರ್ಯಕ್ರಮ ಉದ್ಘಾಟಿಸಿದರು. ಸೇವಾ ಸಮಿತಿ ಕಾರ್ಯದರ್ಶಿ ಸುರೇಶ್ ಕುಮಾರ್ ಭಟ್, ಕೋಶಾಧಿಕಾರಿ ಕೃಷ್ಣ ಮೋಹನ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಹಾಬಲ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ರವಿಶಂಕರ ಭಟ್, ರಘನಾಥ ಶೆಟ್ಟಿ,ಪಿ.ಎಸ್. ನಾರಾಯಣ ಭಟ್, ಮಧೂರು ಗ್ರಾ.ಪಂ.ಸದಸ್ಯೆ ಶ್ರೀಮತಿ ಟೀಚರ್, ಮಹಿಳಾ ಸಮಿತಿ ಅಧ್ಯಕ್ಷೆ ಶ್ಯಾಮಲ ಮಹಾಬಲ ಶೆಟ್ಟಿ,ಮೋಹನ ಕುಮಾರ್ ಶೆಟ್ಟಿ ಅಡ್ಕ, ಸಾಂಸ್ಕೃತಿಕ ಸಮಿತಿಯ ವಿಶಾಲಾಕ್ಷ ಪುತ್ರಕಳ ಮೊದಲಾದವರು ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ದೇವಸ್ಥಾನ ಸೇವಾ ಸಮಿತಿ, ಬ್ರಹ್ಮಕಲಶ, ಜೀರ್ಣೋದ್ಧಾರ ಸಮಿತಿ ಹಾಗೂ ರಚನಾ ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್, ಬಿಎಂಎಸ್ ಕುದ್ರೆಪ್ಪಾಡಿ ಘಟಕ, ಧ.ಗ್ರಾ.ಯೋಜನೆ ಸ್ವಸಹಾಯ ಸಂಘ, ಕುಟುಂಬಶ್ರೀ ಘಟಕ, ಸ್ಕಂದಾ ಬಾಲಗೋಕುಲ, ಕುದ್ರೆಪ್ಪಾಡಿ ಗುತ್ತು ಫ್ಯಾಮಿಲಿ ಟ್ರಸ್ಟ್, ವತಿಯಿಂದ ರಾಮಚಂದ್ರ ಪೆಜತ್ತಾಯ ಅವರಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು. ಬಳಿಕ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೆಂಕಟ್ರಮಣ ಹೊಳ್ಳ ಅವರು ಸಮಿತಿಯನ್ನು ಬರ್ಖಾಸ್ತುಗೊಳಿಸಿ ಉಳಿತಾಯದ ಮೊತ್ತವನ್ನು ಸೇವಾ ಸಮಿತಿ ಆಧ್ಯಕ್ಷರಿಗೆ ಹಸ್ತಾಂತರಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಆಶೋಕ್ ರೈ ಮಾಯಿಪ್ಪಾಡಿ ಗುತ್ತು ಸ್ವಾಗತಿಸಿ ಬ್ಲಾಕ್ ಪಂ.ಸದಸ್ಯ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸರ್ವೇಶ್‌ ಕುಮಾರ ದೊಡ್ಡಮಾಣಿ ನಿರೂಪಿಸಿ ವಂದಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top