ಕುಟುಂಬ ರಾಜಕೀಯ: ಕರಾವಳಿ ಜಿಲ್ಲೆಗಳಲ್ಲಿ ಬೆಳೆದು ಬಂದಿಲ್ಲ ಯಾಕೆ?

Upayuktha
0

 ಈ "ಸಂತಾನ ರಾಜಕೀ ಯ" ದೇಶದ ಮತ್ತು ರಾಜ್ಯದ ಕೆಲವು ರಾಜಕೀ ಯ ಸಂತಾನ ಗಳಲ್ಲಿ ಬೆಳೆದು ಬಂದಿದೆ; ಇದಕ್ಕೆ ಮೂಲ ಕಾರಣಗಳೇನು ಅನ್ನುವುದರ ಕಡೆಗೆ ದೃಷ್ಟಿ ಹಾಯಿಸಿದಾಗ ಅದಕ್ಕೆ ಪೂರಕವಾದ ಹತ್ತು ಹಲ ವು ಕಾರಣಗಳು ವೇದ್ಯ ವಾಗುತ್ತದೆ. ಅದನ್ನು ವಿಶ್ಲೇ ಷಿಸುವ ಕಿರು ಪ್ರಯತ್ನ ಇಲ್ಲಿದೆ.



ಪ್ರಾದೇಶಿಕ ಪಕ್ಷ: ಸಂತಾನ ರಾಜಕೀಯ ಹುಟ್ಟಿ ಬರಲು ಬಹುಮುಖ್ಯ ಕಾರಣ ಪ್ರಾದೇಶಿಕ ಪಕ್ಷಗಳ ಹುಟ್ಟು ಅನ್ನುವುದು ಪ್ರಾದೇಶಿಕ ಪಕ್ಷಗಳ ಜಾತಕ ಜಾಲಾಡಿದಾಗ ಕಂಡು ಬರುವ ವಾಸ್ತವಿಕ ಸಂಗತಿ.ಇದಕ್ಕೆ ಸಾಕಷ್ಟು ನಿದಶ೯ನಗಳು ನಮ್ಮ ಮುಂದೆ ಸಾಲು ಸಾಲಾಗಿ ನಿಲ್ಲಿಸುತ್ತವೆ. ತಮಿಳುನಾಡಿನ ಡಿಎಂ.ಕೆ. ಉತ್ತರ ಪ್ರಾದೇಶದ ಎಸ್.ಪಿ, ಬಿಹಾರದ ಆರ್.ಜೆ.ಡಿ, ಬಹು ದೂರವೇಕೆ ನಮ್ಮದೇ ರಾಜ್ಯದಲ್ಲಿ ಜೆಡಿಎಸ್, ಇವುಗಳೆಲ್ಲವೂ ಕೂಡ ಸಂತಾನ ರಾಜಕೀಯದ ಬೇರುಗಳು. ಸುಲಭವಾಗಿ ಇವುಗಳನ್ನು ಅಲುಗಾಡಿಸುವುದು ಕಷ್ಟ.ಮಾತ್ರವಲ್ಲ ಇವುಗಳೆಲ್ಲಾ ಆಯಾಯ ಕುಟುಂಬದ ಸ್ಥಿರ ಆಸ್ತಿ. ಹಾಗಾಗಿ ಇದರ ಲಾಭ ಬಂಡವಾಳ ಕುಟುಂಬದ ಒಳಗೆ ಸುತ್ತುತ್ತಿರ ಬೇಕು. ಅಂತೂ ಅಪ್ಪ ಮಗ ಮೊಮ್ಮಗಳು ಅಳಿಯ ಸೊಸೆಯಂದಿರೆ ಅದರ ವಾರಿಸುವುದಾರರಾಗ ಬೇಕು. ಯಾಕೆಂದರೆ ಅವರೇ ಜಾತಿ ಹಣದ ಬಂಡವಾಳ ಹಾಕಿ ಕಟ್ಟಿದ ಸಂಸ್ಥೆ ಅಲ್ಲವೇ?

ಈ ಸಂತಾನ ಪಿಂಡದ ರಾಜಕೀಯ ಬೆಳೆದು ಗಟ್ಟಿಯಾಗಿ ಬೇರೂರಲು ಇನ್ನೊಂದು ಕಾರಣ ಜಾತಿ ಪ್ರಾಬಲ್ಯ. ಯಾವುದೇ ರಾಜ್ಯ/ ಕ್ಷೇತ್ರದಲ್ಲಿ ನಿಮ್ಮ ಜಾತಿ ಚುನಾವಣೆಯ ಭವಿಷ್ಯ ನಿಧ೯ರಿಸುವ ಪ್ರಮಾಣದಲ್ಲಿ ಇದೆ ಅಂತಾದರೆ ಅಲ್ಲಿ ಅವರ ಸಂತಾನ ರಾಜಕೀಯ ಬೆಳೆಸುವ ಎಲ್ಲಾ ವ್ಯವಸ್ಥೆಯನ್ನು ಅವರೇ ಮಾಡಿಕೊಂಡು ಹೇೂಗುತ್ತಾರೆ. ಇದಕ್ಕೆ ಬೇಕಾಗುವ ಸಾಕಷ್ಟು ಉದಾಹರಣೆಗಳು ನಮ್ಮ ರಾಜ್ಯದ ಕಾಂಗ್ರೆಸ್ನ್ನಲ್ಲೂ ಇದೆ ಬಿಜೆಪಿ ಯಲ್ಲೂ ಇದೆ. ಕರಾವಳಿ ಹೊರತು ಪಡಿಸಿ ಬೇರೆ ಜಿಲ್ಲೆ ಗಳಲ್ಲಿನ ಕೆಲವೊಂದಿಷ್ಟು ಜಾತಿ ಆಧರಿತ ರಾಜಕಾರಣಿಗಳಿಗೆ ಈ ರಾಜಕೀಯವೇ ಒಂದು ಉದ್ಯಮ ವ್ಯಾಪಾರಿ ಕೇಂದ್ರ ಅವುಗಳ ಲಾಭ ನಷ್ಟಗಳ ಸರಿಯಾದ ಲೆಕ್ಕಾಚಾರ ಅವರಿಗೆ ತಿಳಿದಿದೆ. ಹಾಗಾಗಿ ಅವರ ಮಕ್ಕಳನ್ನು ಯಾವುದೆ ಉನ್ನತ ಶಿಕ್ಷಣಕ್ಕಾಲಿ ಉದ್ಯೋಗಕ್ಕಾಗಲಿ ಕಳುಹಿಸಿ ಕೊಡದೆ ತಮ್ಮ ಗೂಟದ ಕಾರಿನ ಬಾಗಿಲಿಗೆ ಕಟ್ಟಿಕೊಂಡಿರುತ್ತಾರೆ. ಇಂತವರಿಗೆ ಪಕ್ಷ ಸಿದ್ಧಾಂತಗಳು ಮುಖ್ಯವಲ್ಲ ಅಧಿಕಾರ ಮುಖ್ಯ. ಹಾಗಾಗಿ ಈ ಸಂತಾನ ರಾಜ ಕಾರಣದಲ್ಲಿ ಚುನಾವಣೆ ಯಲ್ಲಿ ಒಂದಲ್ಲ ಹತ್ತು ಅಜಿ೯ ಗಳು ಇವರ ಕಡೆಯಿಂದಲೇ ಬಂದಿರುತ್ತದೆ. ಇದನ್ನು ಪ್ರಶ್ನೆ ಮಾಡುವ ಧೈರ್ಯ ಸಾಮಥ್ಯ೯ ಯಾವುದೆ ಕಾರ್ಯಕರ್ತನಿಗೂ ಇಲ್ಲ. ನಾಯಕರಿಗೂ ಇಲ್ಲ.

ಅದೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾಣಲು ಸಾಧ್ಯನೇ ಇಲ್ಲ. ಅಂದರೆ ಇಲ್ಲಿ ಜಾತಿ ರಾಜಕೀಯ ಬೇಳೆ ಬೇಯುವುದಿಲ್ಲ. ಹೊರತು ಧಮ೯ ರಾಜಕೀಯದ ಮೇಲಾಟವಿದೆ. ಹಾಗಾಗಿ ಎಲ್ಲಾ ವಗ೯ದ ಜಾತಿಯ ನಾಯಕರು ಗಳು ರಾಜಕೀಯದಲ್ಲಿ ತಲೆ ಎತ್ತಿ ಬರಲು ಸಾಧ್ಯವಾಗಿದೆ. ಮಾತ್ರವಲ್ಲ ಒಬ್ಬಿಬ್ಬರು ಸ್ವ ಸಾಮರ್ಥ್ಯದಿಂದ ಗೆದ್ದು ಬಂದರು ಕೂಡ ಅದನ್ನು ತಮ್ಮ ಮುಂದಿನ ಪೀಳಿಗೆಗೆ ಮುಂದುವರಿಸುವುಕ್ಕೆ ಒಪ್ಪದ ಮನ:ಸ್ಥಿತಿ ಮತ್ತು ಈ ನೆಲದ ಮಣ್ಣಿನ ರಾಜಕೀಯ ಗುಣವೂ ಹೌದು.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top