ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗ ಹಾಗೂ ಮಂಗಳ ಯೋಜನೆ - ಗ್ರಾಮ ದತ್ತು ಸ್ವೀಕಾರ ಮತ್ತು ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ (ಕರ್ನಾಟಕ ಸರ್ಕಾರದ ಸರ್ಕಾರಿ ಶಾಲೆಗಳ ಸುಧಾರಣಾ ಕಾರ್ಯಕ್ರಮ) ವತಿಯಿಂದ ಪರಿಸರ ರಕ್ಷಣಾ ದಿನವನ್ನು ನವಂಬರ್ 25 (ಶುಕ್ರವಾರ ) ರಂದು ಸಂಜೆ 4:00 ಗಂಟೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಪ್ರಯುಕ್ತ, ಕುವೆಂಪು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಯೋಗೇಂದ್ರ ಕೆ. ಅವರು 'ಪರಿಸರ ಸಂರಕ್ಷಣೆ ಏಕೆ ಮತ್ತು ಹೇಗೆ?' ಎಂಬ ವಿಷಯದ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಿಸಲಾಗುವುದು. (https://youtu.be/BmTXk8LYdks).
ಈ ಪ್ರಯುಕ್ತ ಸಾರ್ವಜನಿಕರಿಗಾಗಿ ಪರಿಸರ/ ವನ್ಯಜೀವಿ ಸಂರಕ್ಷಣೆ ಕುರಿತು ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತರು ಮೂಲ ಛಾಯಾಚಿತ್ರವನ್ನು ಇ-ಮೇಲ್ ವಿಳಾಸಕ್ಕೆ (pn.bioscience.research@gmail.com) ಕಳುಹಿಸಬೇಕು. ಒಬ್ಬರಿಗೆ ಒಂದೇ ಛಾಯಾಚಿತ್ರವನ್ನು ಕಳುಹಿಸಲು ಅವಕಾಶ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ