ಏನಾಗಿದೆ ನನ್ನ ಹೃದಯ ಆಲ್ಬಮ್ ಸಾಂಗ್ ನ ಟೀಸರ್ ಬಿಡುಗಡೆ

Upayuktha
0




ಪುತ್ತೂರು: AU Creations ನಿರ್ಮಾಣದಲ್ಲಿ ಹಾಗೂ ಅಚಲ್ ಉಬರಡ್ಕ ಅವರ ಸಾಹಿತ್ಯ ಮತ್ತು ನಿರ್ದೇಶನದಲ್ಲಿ ಹೊಸ ಆಲ್ಬಮ್ ಸಾಂಗ್ ಮೂಡಿಬರುತ್ತಿದ್ದು, ಇದರ ಸಂಗೀತವನ್ನು ಅಶ್ವಿನ್ ಬಾಬಣ್ಣ ಮಾಡಿದ್ದು ಶರತ್ ಕೆ ಎನ್ ಇವರು ಹಾಡಿರುತ್ತಾರೆ.


ಈ ಆಲ್ಬಮ್ ಸಾಂಗ್ ನ ಛಾಯಾಗ್ರಹಣ ಮತ್ತು ಸಂಕಲನವನ್ನು ಪ್ರಸೀದ ಕೃಷ್ಣ ಇವರು ಮಾಡಿದ್ದು, ಈ ಆಲ್ಬಮ್ ಸಾಂಗ್ ನಲ್ಲಿ ಗುರು ಉಬರಡ್ಕ ಮತ್ತು ಶ್ವೇತ ಲಕ್ಷ್ಮಿ ಕೆ,  ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಮಾತ್ರವಲ್ಲದೆ, ರಾಮನಾಥ ಶೆಣೈ, ಜಗತ್ ಶಾಸ್ತ್ರಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.



ಕೀರ್ತನ ಶ್ರೀ ಮಣಿಮುಂಡ ಇವರು ಕಾಸ್ಟ್ಯೂಮ್ ಡಿಸೈನ್ ಮಾಡಿದ ಸಾಂಗ್ ನ ಚಿತ್ರೀಕರಣ ಪೂರ್ಣಗೊಂಡಿದ್ದು, ಟೈಟಲ್ ಪೋಸ್ಟರನ್ನು ಶಾಂತಿನಗರದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಯು ಜಿ ರಾಧ ಇವರು ಬಿಡುಗಡೆಗೊಳಿಸಿದ್ದು, ಇದೀಗ ಟೀಸರ್ ಕೂಡ ರಿಲೀಸ್ ಆಗಿದ್ದು ಡಿಸೆಂಬರ್ 02 ರಂದು ಸಾಂಗ್ ಬಿಡುಗಡೆಯಾಗಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top