ಡಿ. 4: ದ.ಕ ಜಿಲ್ಲಾ ವಿಶಿಷ್ಟ ಚೇತನರ ದಿನಾಚರಣೆ

Chandrashekhara Kulamarva
0


ಮಂಗಳೂರು: ಸಕ್ಷಮ ದ.ಕ ಜಿಲ್ಲಾ ಘಟಕ ಮತ್ತು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ದ.ಕ ಜಿಲ್ಲಾ ಶಾಖೆ,  ಯುವ ರೆಡ್‌ಕ್ರಾಸ್‌ ಮಂಗಳೂರು ವಿಶ್ವವಿದ್ಯಾನಿಲಯ,- ಇವರ ಸಂಯುಕ್ತ ಆಶ್ರಯದಲ್ಲಿ  ಜಿಲ್ಲಾ ತೃತೀಯ ಸಮಾವೇಶ ಮತ್ತು ವಿಶ್ವ ವಿಶಿಷ್ಟಚೇತನರ ದಿನಾಚರಣೆ ಡಿ.4ರಂದು ಭಾನುವಾರ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂಸದ್ರ ಕಲಾಭವನದಲ್ಲಿ ನಡೆಯಲಿದೆ.


ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿಗಳಾದ ಡಾ. ಎಂ. ಶಾತಾರಾಮ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಕ್ಷಮ ದ.ಕ ಜಿಲ್ಲೆಯ ಅಧ್ಯಕ್ಷರಾದ ಡಾ. ಮುರಳೀಧರ ನಾಯಕ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೆಡ್‌ಕ್ರಾಸ್‌ ದ.ಕ ಜಿಲ್ಲಾ ಶಾಖೆಯ ಸಭಾಪತಿಗಳಾದ ರೊಟೇರಿಯನ್‌ ಸಿ.ಎ ಶಾಂತಾರಾಮ ಶೆಟ್ಟಿ, ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಸಕ್ಷಮ ಪ್ರಾಂತ ಉಪಾಧ್ಯಕ್ಷರಾದ ವಿನೋದ್ ಶೆಣೈ, ಮಂಗಳೂರು ವಿವಿ ಯುವ ರೆಡ್‌ಕ್ರಾಸ್ ಸಂಚಾಲಕ ಡಾ. ಗಣಪತಿ ಗೌಡ ಅವರು ಪಾಲ್ಗೊಳ್ಳಲಿದ್ದಾರೆ.


ಸಕ್ಷಮ ಕರ್ನಾಟಕದ ಟ್ರಸ್ಟಿ ಜಯದೇವ ಕಾಮತ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಳಿಕ ಮೂರು ವಿಚಾರಗೋಷ್ಠಿಗಳು ನಡೆಯಲಿವೆ. ನೇತ್ರದಾನ ಹಾಗೂ ದೇಹದಾನ ಕುರಿತು ಬಿಎಎಸ್‌ಎಫ್‌ ಉಪ ಮಹಾಪ್ರಬಂಧಕರಾದ ರಾಜಶೇಖರ ಭಟ್‌ ಕಾಕುಂಜೆ; ವಿಶೇಷ ಚೇತನರ ಸವಲ್ತುಗಳು- ಸವಾಲುಗಳ ಬಗ್ಗೆ ಡಾ. ಮುರಳೀಧರ ನಾಯಕ್‌ ಮಾತನಾಡಲಿದ್ದಾರೆ. ಕಾನೂನಾತ್ಮಕ ಪೋಷಕತ್ವ ಮತ್ತು ನಿರಾಮಯ ಕುರಿತು ರಾಷ್ಟ್ರೀಯ ದತ್ತುನಿಧಿ ದಕ ಜಿಲ್ಲಾ ಸಮಿತಿಯಿಂದ ಮಾಹಿತಿ ನೀಡಲಾಗುತ್ತದೆ.


ಸಮಾರೋಪ ಸಮಾರಂಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌, ರೆಡ್‌ಕ್ರಾಸ್‌ನ ದಿವ್ಯಾಂಗಕೋಶದ ಚೇರ್‌ಮನ್‌ ಡಾ. ಕೆ.ಆರ್‌. ಕಾಮತ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್‌ ಸಮಾರೋಪ ಭಾಷಣ ಮಾಡಲಿದ್ದಾರೆ. ಮುರಳೀಧರ ನಾಯಕ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಕ್ಷಮ ದಕ ಜಿಲ್ಲೆಯ ಕಾರ್ಯದ್ರಶಿ ಹರೀಶ್‌ ಪ್ರಭು ನಿರ್ಣಯ ಮಂಡಿಸಲಿದ್ದಾರೆ. ಕೃಷ್ನ ಪೂಜಾರಿ ಸ್ವಾಗತ, ಜ್ಯೋತ್ಸ್ನಾ ಅಡಿಗ ವಂದನಾರ್ಪಣೆಯನ್ನು ನಿರ್ವಹಿಸಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top