
ಮೂಡುಬಿದಿರೆ: ಹಾವೇರಿ ಅಗ್ನಿಪಥ್ ರ‍್ಯಾಲಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಮಂಗಳೂರು ಸೇನಾ ನೇಮಕಾತಿ ಕಛೇರಿಯ ಸಹಯೋಗದಲ್ಲಿ ನವೆಂಬರ್ 13ರಂದು ಪುತ್ತಿಗೆಯ ವಿವೇಕಾನಂದ ನಗರದ ಆಳ್ವಾಸ್ ಶಾಲೆಯ ಆವರಣದಲ್ಲಿ ನಡೆಯಲಿದೆ.
ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ವಿಜಯಪುರ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಸೇರಿದಂತೆ 11 ಜಿಲ್ಲೆಗಳಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕಪ್ಪು ಅಥವಾ ನೀಲಿ ಬಣ್ಣದ ಪೆನ್ ಹಾಗೂ ಕ್ಲಿಪ್ ಬೋರ್ಡ್ ಜೊತೆ ನವೆಂಬರ್ 13 ರಂದು ಬೆಳಿಗ್ಗೆ 4 ಗಂಟೆಗೆ ಪರೀಕ್ಷಾ ಸ್ಥಳದಲ್ಲಿ ಹಾಜರಿರುವಂತೆ ತಿಳಿಸಲಾಗಿದೆ.
ಪರೀಕ್ಷೆ ಸೂಸುತ್ರವಾಗಿ ಸಾಗಲು ಸಕಲ ವ್ಯವಸ್ಥೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಮಾಡಲಾಗುತ್ತದೆ. ಮಂಗಳೂರಿನ ಸೇನಾ ನೇಮಕಾತಿ ಕಛೇರಿಯ ನಿರ್ದೇಶಕ ಕರ್ನಲ್ ಅನೂಜ್ ಗುಪ್ತ ಈಗಾಗಲೆ ಸ್ಥಳ ಪರೀಶಿಲನೆ ನಡೆಸಿದ್ದು, ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆಳ್ವಾಸ್ ಸಂಸ್ಥೆಯಿಂದ ಪರೀಕ್ಷೆಯ ಹಿಂದಿನ ದಿನ ತಂಗುವ (ನವೆಂಬರ್ 12) ವಿದ್ಯಾರ್ಥಿಗಳಿಗೆ ಹಾಲ್‌ನ ವ್ಯವಸ್ಥೆ ಮಾಡಲಾಗಿದ್ದು, ಅಭ್ಯರ್ಥಿಗಳು ಚಾಪೆ ಹಾಗೂ ಚಾದರವನ್ನು ತೆಗೆದುಕೊಂಡು ಬರುವಂತೆ ತಿಳಿಸಲಾಗಿದೆ. ಸ್ನಾನ ಹಾಗೂ ಶುಚಿಗೊಳ್ಳಲು ಸಾಕಷ್ಟು ಶೌಚಾಲಯದ ವ್ಯವಸ್ಥೆಯನ್ನು ಸ್ಥಳದಲ್ಲಿ ಮಾಡಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ