ಮಕ್ಕಳು ಮೈದಾನಕ್ಕೆ ಮರಳಿ ಬರಲಿ: ಚೂಂತಾರು

Chandrashekhara Kulamarva
0

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳು ಕಂಪ್ಯೂಟರ್‌ನಲ್ಲಿಯೇ ಕ್ರಿಕೆಟ್, ವಾಲಿಬಾಲ್, ಫುಟ್‌ಬಾಲ್ ಆಡುತ್ತಿರುವುದು ಕಳವಳಕಾರಿ. ದೈಹಿಕ ಕಸರತ್ತು ಮತ್ತು ವ್ಯಾಯಾಮಕ್ಕೆ ಒತ್ತು ನೀಡುವ ಹೊರಾಂಗಣ ಆಟೋಟಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು. ಪಠ್ಯದ ಜೊತೆಗೆ ಹೊರಾಂಗಣ ಕ್ರೀಡೆಗೂ ಆದ್ಯತೆ ನೀಡಬೇಕು. ಹಾಗಾದಲ್ಲಿ ಮಾತ್ರ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಆಗಲು ಸಾಧ್ಯ ಮತ್ತು ಅವರು ಮುಂದೆ ಸಮಾಜಕ್ಕೆ ಆಸ್ತಿಯಾಗಬಲ್ಲರು. ಇಲ್ಲವಾದಲ್ಲಿ ಅಂತಹಾ ಮಕ್ಕಳು ದೈಹಿಕ ವ್ಯಾಯಾಮವಿಲ್ಲದೆ ಎಳೆ ವಯಸ್ಸಿನಲ್ಲಿಯೇ ಬೊಜ್ಜು, ಮಧುಮೇಹ, ಹೃದಯಾಘಾತ ಮುಂತಾದ ಮಾರಕ ರೋಗಗಳಿಗೆ ತುತ್ತಾಗಿ, ಸಮಾಜಕ್ಕೆ ಹೊರೆಯಾಗುವ ಎಲ್ಲಾ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ|| ಮುರಲೀಮೋಹನ ಚೂಂತಾರು ನುಡಿದರು.


ಅವರು ದಿನಾಂಕ 20-11-2022ನೇ ಭಾನುವಾರದಂದು ನಗರದ ಬೋಂದೆಲ್ ಆಟದ ಮೈದಾನದಲ್ಲಿ ಪೃಥ್ವಿ ಚಾರಿಟೇಬಲ್ ಟ್ರಸ್ಟ್, ಮಹಾತ್ಮ ನಗರ, ಕ್ಷೇಮಾಭಿವೃದ್ಧಿ ಸಂಘ, ಕೆ.ಎಚ್.ಬಿ. ಕಾಲೊನಿ ಕ್ಷೇಮಾಭಿವೃದ್ಧಿ ಸಂಘ ಚೈತನ್ಯ ಮಹಿಳಾ ಮಂಡಳಿ ಹಾಗೂ ಗಣೇಶೋತ್ಸವ ಸಮಿತಿ ಜಂಟಿಯಾಗಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸೈಕಲ್ ಜಾಥಾ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.


ಮಕ್ಕಳಲ್ಲಿ ಪರಿಸರ ಕಾಳಜಿ ಮತ್ತು ಆರೋಗ್ಯ ಕಾಳಜಿ ಮೂಡಿಸುವ ಸಲುವಾಗಿ ಈ ಕರ‍್ಯಕ್ರಮ ಆಯೋಜಿಸಲಾಗಿದೆ ಎಂದು ಪೃಥ್ವಿ ಚಾರಿಟೇಬಲ್ ಟ್ರಸ್ಟ್ ಇದರ ಸದಸ್ಯರಾದ ಶ್ರೀ ಕೃಷ್ಣಪ್ಪ ಪಿ. ಮತ್ತು ರಾಮಚಂದ್ರ ಭಟ್ ತಿಳಿಸಿದರು. ಸುಮಾರು 30 ಮಕ್ಕಳು ಈ ಸೈಕಲ್ ಜಾಥಾದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಮಕ್ಕಳ ನಿಧಾನಗತಿಯ ಸೈಕಲ್ ರೇಸ್ ಮತ್ತು ಸ್ಪೀಡ್ ಸೈಕಲ್ ರೇಸ್ ಸ್ಪರ್ಧೆ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top