ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 74ನೆ ಜನ್ಮದಿನವನ್ನು ಶುಕ್ರವಾರ ಧರ್ಮಸ್ಥಳದಲ್ಲಿ ಸರಳವಾಗಿ ಸಂಬ್ರಮ-ಸಡಗರದಿAದ ಆಚರಿಸಲಾಯಿತು.
ದೇವಳದ ನೌಕರರು, ಊರಿನ ನಾಗರಿಕರು, ಭಕ್ತರು, ಅಭಿಮಾನಿಗಳು ಶ್ರದ್ಧಾ-ಭಕ್ತಿಯಿಂದ ಜನ್ಮದಿನದ ಶುಭಾಶಯ ಅರ್ಪಿಸಿದರು.
ಮಾಣಿಲದ ಮೋಹನದಾಸ ಸ್ವಾಮೀಜಿ, ಮಾಜಿ ಸಚಿವ ಕೆ.ಅಭಯಚಂದ್ರಜೈನ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಶಾಸಕ ಹರೀಶ್ ಪೂಂಜ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹೆಗ್ಗಡೆಯವರಿಗೆ ಶುಭಾಶಯ ಸಲ್ಲಿಸಿದರು.
ದೂರವಾಣಿ, ವಿದ್ಯುದಂಚೆ, ಪತ್ರಗಳ ಮೂಲಕವೂ ಶುಭಾಶಯಗಳು ಹರಿದು ಬಂದಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ