ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ | ನಿಕಟಪೂರ್ವ ಅಧ್ಯಕ್ಷರಿಂದ ಧ್ವಜ ಹಸ್ತಾಂತರ
ಬಂಟ್ವಾಳ: ಬಂಟ್ವಾಳ ತಾಲೂಕಿನ ಅಮ್ಮುಂಜೆಯಲ್ಲಿ 22 ನೇ ಕ.ಸಾ.ಪ ತಾಲೂಕು ಸಮ್ಮೇಳನವು ನ.12, 13ರಂದು ಬಹು ವಿಜೃಂಭಣೆಯಿಂದ ನೆರವೇರಿತು. ಭವ್ಯ ಮೆರವಣಿಗೆಯ ನಂತರ ಕ್ಷೇತ್ರ ಶಾಸಕ ರಾಜೇಶ್ ನಾಯಕ್ ಉಳ್ಳಿಪ್ಪಾಡಿ ಗುತ್ತು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಪ್ರಸಕ್ತ ಸಾಲಿನ ಕ.ಸಾ.ಪ ಜಿಲ್ಲಾಧ್ಯಕ್ಷ ಡಾ ಎಂ.ಪಿ ಶ್ರೀನಾಥ ಮತ್ತು ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಮತ್ತಿತರ ಕಾರ್ಯಕಾರೀ ಸಮಿತಿಯ ಉಸ್ತುವಾರಿಯಲ್ಲಿ ನಡೆದ ಸಮಾರಂಭದಲ್ಲಿ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಬಂಟ್ವಾಳ ತಾಲೂಕಿನ ನೆಗಳಗುಳಿಯ ವರಾದ ಪ್ರಕೃತ ಮಂಗಳೂರಿನಲ್ಲಿ ಮಂಗಳಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಹಾಗೂ ಮೂಲವ್ಯಾಧಿ ತಜ್ಞ, ಬರಹಗಾರ ಡಾ ಸುರೇಶ ನೆಗಳಗುಳಿ ಇವರು ನೂತನ ಸಮ್ಮೇಳನಾಧ್ಯಕ್ಷ ಪಿ. ಬಾಲಕೃಷ್ಣ ಗಟ್ಟಿ ಇವರಿಗೆ ಧ್ವಜವನ್ನು ಹಸ್ತಾಂತರಿಸುವ ಮೂಲಕ ಮುಂದಿನ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಡಾ ನೆಗಳಗುಳಿ ಅವರು ತನ್ನದೇ ರಚಿನೆಯ ತರಂಗದಲ್ಲಿ ಪ್ರಕಟವಾಗಿದ್ದ ಕನ್ನಡದ ಬಗೆಗಿನ ಗಝಲ್ ಒಂದನ್ನು ವಾಚಿಸಿ ಮಾತು ಆರಂಭಿಸಿದರು. ಪ್ರತಿಯೊಬ್ಬರೂ ಕನ್ನಡ ಮಾತನಾಡುವ ಶಪಥ ತೊಟ್ಟಾಗ ಮಮ್ಮಿ ಡ್ಯಾಡಿ ಸಂಸ್ಕೃತಿಯಾಗಲೀ ಕಂಗ್ಲಿಷ್ ಸಂಸ್ಕೃತಿಯಾಗಲೀ ದೂರಾಗ ಬಲ್ಲುದು. ಪರಭಾಷಿಗ ನಮ್ಮಲ್ಲಿಗೆ ಬಂದಾಗ ಅವರ ಭಾಷೆ ಬಳಸದೆ ನಮ್ಮ ಭಾಷೆಯನ್ನು ಅವರಿಗೆ ಕಲಿಸ ಬೇಕು. ಹಾಗೆಯೇ ಕನ್ನಡ ಶಾಲೆಗಳ್ಲಿ ಕನ್ನಡ ಸಾಹಿತ್ಯ ಬೆಳೆಯಲು ಮಕ್ಕಳಿಗೆ ಕಮ್ಮಟಗಳನ್ನು ಕಡ್ಡಾಯವಾಗಿ ಮಾಡಿ ಅವರ ಬರೆಹಗಳ ಸಂಕಲನವನ್ನು ಪರಿಷತ್ರು ಪ್ರಕಟಿಸಿ ಪ್ರೋತ್ಸಾಹಿಸ ಬೇಕು ಎಂದು ನುಡಿದರು.
ನೂತನ ಅಧ್ಯಕ್ಷರಿಂದ ಸಾಹಿತ್ಯ ಮತ್ತು ಪತ್ರಿಕೋದ್ಯಮ ಮತ್ತಿತರ ಕನ್ನಡಪರ ಮಾತುಗಳ ಸಹಿತ ಅಂದಿನ ಕಾರ್ಯಕ್ರಮ ಮುಕ್ತಾಯವಾಯಿತು. ಕವಿಗೋಷ್ಠಿ- ಮತ್ತು ಬೆಂಜನಪದವು ತಾಂತ್ರಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮೊದಲ ದಿನದ ಸಮಾರಂಭಕ್ಕೆ ಕಳೆ ತಂದವು. ಮರುದಿನ ಹಲವಾರು ಗೋಷ್ಠಿಗಳೂ, ಕವಿಗೋಷ್ಠಿ-, ತಾಳಮದ್ದಳೆ, ಸಾಧಕ ಸನ್ಮಾನ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪ ಗೊಂಡವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ