ಆಳ್ವಾಸ್ ಹೈಸ್ಕೂಲಿನ ಪ್ರಾಜೆಕ್ಟ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Upayuktha
0

ಮೂಡುಬಿದಿರೆ: ಪುತ್ತೂರಿನ ವಿವೇಕಾನಂದ ಸಂಸ್ಥೆಯು ಸೈನ್ಸ್ ಸೊಸೈಟಿ ಆಫ್ ಇಂಡಿಯಾದ ಸಹಯೋಗದೊಂದಿಗೆ ಆಯೋಜಿಸಿದ "ಆವಿಷ್ಕಾರ್ 2022" ಅಂಗವಾಗಿ ನಡೆದ "ಇನ್‌ಸೆಫ್ ರೀಜನಲ್ ಸೈನ್ಸ್ ಫೇರ್" ನಲ್ಲಿ ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ 8 ನೇ ತರಗತಿಯ ವಿದ್ಯಾರ್ಥಿಗಳಾದ ಅಮೋಘ ಹೆಬ್ಬಾರ್ ಮತ್ತು ಈಶಾನ್ ವೆಂಕಟೇಶ್ ಜೂನಿಯರ್ ವಿಭಾಗದಲ್ಲಿ ಪ್ರದರ್ಶಿಸಿದ ಪ್ರಾಜೆಕ್ಟ್ ವಿಶೇಷ ಬೆಳ್ಳಿ ಪದಕ ಗಳಿಸಿ ರಾಷ್ಟ್ರಮಟ್ಟದ ಪ್ರದರ್ಶನಕ್ಕೆ ಆಯ್ಕೆಗೊಂಡಿದೆ.


ತೆಂಗಿನ ಗೆರಟೆ ಎಣ್ಣೆಯ ಔಷಧೀಯ ಗುಣಗಳ ಅಧ್ಯಯನದ ಈ ಪ್ರಾಜೆಕ್ಟ್ ಗೆ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಡಾ| ಅಜಿತ್ ಹೆಬ್ಬಾರ್ ಮಾರ್ಗದರ್ಶನ ನೀಡಿದ್ದರು. ಸೀನಿಯರ್ ವಿಭಾಗದ ವಿದ್ಯಾರ್ಥಿನಿಯರಾದ ನಿಧಿ ಬೇಡೆಕರ್ ಮತ್ತು ನಿಧಿ ಶೆಟ್ಟಿ ಮಂಡಿಸಿದ "ಪರಿಸರ ಸ್ನೇಹಿ ಧಾನ್ಯ ರಕ್ಷಣೆ" ಎಂಬ ಪ್ರಾಜೆಕ್ಟ್ ಕಂಚಿನ ಪದಕ ಗಳಿಸಿ ವೀಕ್ಷಕರ ಗಮನ ಸೆಳೆಯಿತು. ವಿಜ್ಞಾನ ಶಿಕ್ಷಕಿಯಾದ ಜೋಸಲಿನ್ ಲಸ್ರಾಡೊ ಈ ಪ್ರಾಜೆಕ್ಟಿಗೆ ಮಾರ್ಗದರ್ಶಕಿಯಾಗಿದ್ದರು.


ಆಳ್ವಾಸ್ ಹೈಸ್ಕೂಲು, ಸ್ಟೇಟ್ ವಿಭಾಗದ ರಾಜ್ ಬಂಗೇರ ಹಾಗೂ ಶಾಸ್ತ ಸಂಪ್ರೀತ್ ಸಿದ್ಧಪಡಿಸಿದ "ಬಿತ್ತನೆ ಯಂತ್ರ" ಗೌರವಾನ್ವಿತ ಉಲ್ಲೇಖ ವಿಭಾಗದಲ್ಲಿ ತೀರ್ಪುಗಾರರ ಮೆಚ್ಚುಗೆ ಗಳಿಸಿತು. ಶಿಕ್ಷಕಿಯರಾದ ಸಂಧ್ಯಾ ಹಾಗೂ ಪೂಜಾ ಈ ಪ್ರಾಜೆಕ್ಟ್ ಗೆ ಸಹಕಾರ ನೀಡಿದರು. ಮುಂದಿನ ಹಂತದ ರಾಷ್ಟ್ರ ಮಟ್ಟದ ಸ್ಪರ್ಧೆಯ ದಶಂಬರ್ 2022ರಲ್ಲಿ ನಡೆಯಲಿದೆ. ಆಳ್ವಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ ಆಳ್ವ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
To Top