ಮಂಗಳೂರು ಅಂತರ್ ವಿವಿ ಬ್ಯಾಡ್ಮಿಂಟನ್ ಪಂದ್ಯಾಟ: ಆಳ್ವಾಸ್‌ಗೆ ಎಂಟನೇ ಬಾರಿ ರೋಲಿಂಗ್ ಶಿಲ್ಡ್ ಗೌರವ

Upayuktha
1 minute read
0

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಬ್ಯಾಡ್ಮಿಂಟನ್ ಪಂದ್ಯಾವಳಿಯು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್‌ನಲ್ಲಿ ಜರುಗಿತು. ಈ ಪಂದ್ಯಾವಳಿಯಲ್ಲಿ ಪುರುಷರ 32 ತಂಡ ಹಾಗೂ ಮಹಿಳೆಯರ 26 ತಂಡಗಳು ಭಾಗವಹಿಸಿದ್ದವು.


ಪುರುಷರ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಆಯ್ಕೆಯಾಗಿ ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಸಂತ ಅಲೋಶಿಯಸ್ ತಂಡವನ್ನು 3-0 ನೇರ ಸುತ್ತುಗಳಿಂದ ಸೋಲಿಸಿ ಕೆಮ್ಮಾರೆ ಬಾಲಕೃಷ್ಣ ಗೌಡ ಮೆಮೋರಿಯಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಈ ಸಾಧನೆಯೊಂದಿಗೆ ಆಳ್ವಾಸ್ ಕಾಲೇಜು ರೋಲಿಂಗ್ ಶಿಲ್ಡ್ ನ ಎಂಟನೇ ಬಾರಿಗೆ ತನ್ನದಾಗಿಸಿಕೊಂಡಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top